ಕಾಸರಗೋಡು: ದೃಷ್ಟಿ ಕಲಾ ಸಾಂಸ್ಕøತಿಕ ವೇದಿಕೆ ಕಾಸರಗೋಡು ವತಿಯಿಂದ ಕೊಡಮಾಡುವ ಪತ್ರಕರ್ತರಾದ ಕಳತ್ತಿಲ್ ರಾಮಕೃಷ್ಣನ್ ಮತ್ತು ಮುತ್ತಲೀಬ್ ಮಾಧ್ಯಮ ಪುರಸ್ಕಾರ ಪ್ರಕಟಿಸಲಾಗಿದೆ. ಕಳತ್ತಿಲ್ ರಾಮಕೃಷ್ಣನ್ ಪುರಸ್ಕಾರಕ್ಕೆ ಪತ್ರಕರ್ತ ಎಂ.ವಿ ವಸಂತ ಪಾಲ್ಘಾಟ್ ಹಾಗೂ ಮುತ್ತಲೀಬ್ ಮಾಧ್ಯಮ ಪುರಸ್ಕಾರಕ್ಕೆ ಕಾಸರಗೋಡಿನ ಶಾಫಿ ತೆರುವತ್ ಅವರನ್ನು ಆಯ್ಕೆ ಮಾಡಲಾಗಿದೆ. ಜೂನ್ 15ರಂದು ಮಧ್ಯಾಹ್ನ 3ಕ್ಕೆ ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪರಶಸ್ತಿ ಪ್ರದಾನ ಮಾಡಲಾಗುವುದು. ಕಾಸರಗೋಡು ನಗರಸಭಾ ಅಧ್ಯಕ್ಷ ವಕೀಲ ವಿ.ಎಂ ಮುನೀರ್ ಉದ್ಘಾಟಿಸುವರು.