HEALTH TIPS

ಟೆಲಿಗ್ರಾಮ್ ಬಳಕೆದಾರರಿಗೆ ಸಿಹಿಸುದ್ದಿ​​; ನೂತನ ಫೀಚರ್​ ಒದಗಿಸಲು ಮುಂದಾದ ಕಂಪನಿ

             ದೆಹಲಿ: ವಿಶ್ವದಾದ್ಯಂತ ಮಿಲಿಯನ್​ಗಟ್ಟಲೇ ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಮ್​ ಬಳಕೆದಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಹೊಸ ಫೀಚರ್​ನ್ನು ನೀಡಲು ಮುಂದಾಗಿದೆ.

                  ಇಂದಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಿಟ್ಟಿರುವುದು ಅಸಾಧ್ಯವಾಗಿದೆ.

                   ಬೆಳಿಗ್ಗೆಯಿಂದ ಹಿಡಿದು ಸಾಯಂಕಾಲವರೆಗೆ ಇಂದಿನ ಯುವಕರು ಸದಾ ಈ ಜಾಲತಾಣಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಹಾಗಾಗಿಯೇ ಟೆಲಿಗ್ರಾಮ್​ ಸ್ಟೋರಿಸ್​​ ಎಂಬ ಫೀಚರ್​​ನ್ನು ಪರಿಚಯಿಸಲು ಮುಂದಾಗಿದೆ.
              ಸ್ಟೋರಿಸ್​ಗಳು ನಮ್ಮ ಜೀವನಕ್ಕೆ ಹತ್ತಿರವಾಗಿದ್ದು, ನಮ್ಮ ಜೀವನದ ಸಂಗತಿಗಳ ಬಗ್ಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಇವುಗಳ ಮೂಲಕ ಸ್ನೇಹಿತರು ಸೇರಿದಂತೆ ಸಂಬಂಧಿಕರು ಕೂಡ ತಿಳಿದುಕೊಳ್ಳಬಹುದಾಗಿದೆ. ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್​​, ಟೆಲಿಗ್ರಾಮ್​ ಶೀಘ್ರದಲ್ಲೇ ಸ್ಟೋರಿಸ್​​ ಫೀಚರ್​ನ್ನು ಒಳಗೊಂಡಿರುತ್ತದೆ ಎಂದು ಹೇಳಿದ್ದಾರೆ.
                ಇನ್​ಸ್ಟಾಗ್ರಾಮ್​​ನಲ್ಲಿ ಸ್ಟೋರಿಸ್​​ಗಳು 24 ಗಂಟೆಗಳ ನಂತರ ಸ್ವಯಂಚಾಲಿತವಾಗಿ ಮುಕ್ತಾಯಗೊಳ್ಳುತ್ತವೆ, ಆದರೆ ಟೆಲಿಗ್ರಾಮ್​ನಲ್ಲಿ ಬಳಕೆದಾರರು ತಮ್ಮ ಸ್ಟೋರಿಸ್​​ ಅಪ್​ಲೋಡ್​ ಮಾಡಿದ ನಂತರ ಯಾವಾಗ ಮುಕ್ತಾಯವಾಗಬೇಕು ನಿರ್ಧರಿಸಲು ನಾಲ್ಕು ಆಯ್ಕೆಗಳನ್ನು ಹೊಂದಿರುತ್ತಾರೆ.
                  ಈ ಸ್ಟೋರಿಸ್​ಗಳು 6, 12, 24, ಹಾಗೂ 48 ಗಂಟೆಗಳ ಮುಕ್ತಾಯ ಅವಧಿಯನ್ನು ಒಳಗೊಂಡಿರುತ್ತದೆ. ಜತೆಗೆ ಬಳಕೆದಾರರು ಟೆಲಿಗ್ರಾಮ್‌ನಲ್ಲಿ ತಮ್ಮ ಪ್ರೊಫೈಲ್ ಪುಟದಲ್ಲಿ ಸ್ಟೋರಿಸ್​​​ಗಳನ್ನು ಶಾಶ್ವತವಾಗಿ ಪ್ರದರ್ಶಿಸಬಹುದಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries