ಪೆರ್ಲ: ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ವಿರುದ್ಧ ಸುಳ್ಳು ಕೇಸುಗಳನ್ನು ದಾಖಲಿಸಿ ವಿಚಾರಣಾ ನೆಪದಲ್ಲಿ ಬಂಧಿಸಿದ ರಾಜ್ಯ ಸರ್ಕಾರದ ಪಕ್ಷ ರಾಜಕೀಯ ನೀತಿಯನ್ನು ಖಂಡಿಸಿ ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಪೆರ್ಲ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು.
ಇದರ ಅಂಗವಾಗಿ ಪೆರ್ಲದಲ್ಲಿರುವ ಇಂದಿರಾ ಭವನದ ಮುಂಭಾಗದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ ಎಡರಂಗ ಸರ್ಕಾರದ ಪಕ್ಷ ದ್ವೇಷ ರಾಜಕೀಯ ವಿರುದ್ಧ ಘೋಷಣೆ ಕೂಗಿದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿದರು. ಮಂಡಲಾಧ್ಯಕ್ಷ ಬಿ.ಎಸ್. ಗಾಂಭೀರ್ ಸಭೆಯ ಅಧ್ಯಕ್ಷತೆವಹಿಸಿದ್ದರು. ಪ್ರತಿಭಟನೆಗೆ ಪಕ್ಷದ ನೇತಾರರಾದ ರವೀಂದ್ರನಾಥ ನಾಯಕ್, ರಾಧಾಕೃಷ್ಣ ನಾಯಕ್ ಶೇಣಿ, ಅಬ್ದುಲ್ಲ ಕುರೆಡ್ಕ,ಆರಿಸ್ ಎಂ.ಎಚ್ , ಜಬ್ಬಾರ್ ನಲ್ಕ, ಸುಧಾಕರ್ ರೈ, ಹನೀಫ್ ಕಾಟುಕುಕ್ಕೆ, ಮಾಯಿಲ ನಾಯ್ಕ್, ಶ್ರೀನಿವಾಸ್ ಶೆಣೈ, ನವೀನ್ ಕುಮಾರ್ ಉಕ್ಕಿನಡ್ಕ, ಕೇರಿಮ್ ಕಾಟುಕುಕ್ಕೆ, ನೌμÁ ಕುದ್ರೆಡ್ಕ, ಬಾಲಕೃಷ್ಣ, ಕಮಲಾಕ್ಷ ಮೊದಲಾದವರು ನೇತೃತ್ವ ನೀಡಿದರು. ಯೂತ್ ಕಾಂಗ್ರೆಸ್ ಮಂಡಲಾಧ್ಯಕ್ಷ ಫಾರೂಕ್ ಪಳ್ಳಂ ಸ್ವಾಗತಿಸಿ, ವಿಲ್ಪ್ರೆಡ್ ಡಿ.ಸೋಜ ವಂದಿಸಿದರು.