ಕಾಸರಗೋಡು: ಭಾರಿ ಮೊತ್ತದ ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಎ.ಐ ಕ್ಯಾಮೆರಾಗಳು ಸೋಮವಾರದಿಂದ ದಂಡ ವಸೂಲಿ ಆರಂಭಿಸುತ್ತಿದ್ದಂತೆ ಮುಸ್ಲಿಂ ಯೂತ್ ಲೀಗ್‍ನ ಕಾಸರಗೋಡು ಮಂಡಲ ಸಮಿತಿ ವತಿಯಿಂದ ಕ್ಯಾಮರಾ ಭ್ರಷ್ಟಾಚಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಕಾಸರಗೋಡಿನ ಎಂಜಿ ರಸ್ತೆಯಲ್ಲಿ ಹಳೇ ಬಸ್ ನಿಲ್ದಾಣ ವಠಾರದ ಎಐ ಕ್ಯಾಮೆರಾ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಪಕ್ಷದ ರಾಜ್ಯ ಸಮಿತಿ ಉಪಾಧ್ಯಕ್ಷ ಅಶ್ರಫ್ ಏತನೀರು ಉದ್ಘಾಟಿಸಿದರು, ಜಿಲ್ಲಾಧ್ಯಕ್ಷ ಸಿದ್ದೀಕ್ ಸಂತೋಷ ನಗರ ಅಧ್ಯಕ್ಷತೆ ವಹಿಸಿದ್ದರು. ಮಾಹಿನ್ ಕೇಳೋಟ್, ಟಿ.ಎಂ.ಇಕ್ಬಾಲ್, ಜಹೀರ್ ಆಸಿಫ್, ಟಿ.ಇ.ಮುಖ್ತಾರ್, ನಾಸರ್ ಚಾಯಿಂಡಡಿ, ಬಶೀರ್ ತೊಟ್ಟಾನ್, ಹಮೀದ್ ಬೆದಿರ, ನೂರುದ್ದೀನ್ ಬೆಳಿಂಜ, ನೌಫಲ್ ತಾಯಲ್, ಖಲೀಲ್ ಸಿಲೋನ್, ಇಕ್ಬಾಲ್ ಬದಿಯಡ್ಕ, ಜಲೀಲ್ ತುರುತ್ತಿ, ರಹಮಾನ್ ತೊಟ್ಟಾಣಿ, ಶಫೀಕ್ ಪಿಬಿಎಸ್, ರಶೀದ್ ಗಸಾಲಿ, ಮುಜೀಬ್ ತಾಯಲಂಗಡಿ ಮತ್ತಿತರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹಾರಿಸ್ ಬೆದಿರ ಸ್ವಾಗತಿಸಿದರು.