HEALTH TIPS

ಬೆಲೆಬಾಳುವ ಮರಗಳ ಉತ್ಪಾದನೆಗೆ ಅರಣ್ಯ ಇಲಾಖೆಯಿಂದ ಆರ್ಥಿಕ ನೆರವು

  


            ಕಾಸರಗೋಡು: ಖಾಸಗಿ ಜಮೀನುಗಳಲ್ಲಿ ಬೆಲೆಬಾಳುವ ಮರಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಎಲ್ಲಾ ರೀತಿಯ ಮರಗಳಲ್ಲಿ ಸ್ವಾವಲಂಬನೆ ಸಾಧಿಸುವುದರ ಜತೆಗೆ ಭೂಮಾಲೀಕರಿಗೆ ಹೆಚ್ಚುವರಿ ಆದಾಯವನ್ನು ಗಳಿಸಲು ಅರಣ್ಯ ಇಲಾಖೆ ಪೆÇ್ರೀತ್ಸಾಹ ಧನ ನೀಡುವ ಯೋಜನೆಯನ್ನು ಜಾರಿಗೊಳಿಸುತ್ತಿದೆ. 

          ಸಾಗುವಾನಿ, ಶ್ರೀಗಂಧ, ಮಹಾಗನಿ, ಹಲಸು, ಬೀಟೆ, ಹೆಬ್ಬಲಸು ಮುಂತಾದ ಮೋಪಿನಮರಗಳಾಗುವ ಸಸಿಗಳನ್ನು ನೆಟ್ಟು ಬೆಳೆಸುವ ಯೋಜನೆ ಇದಾಗಿದೆ. ಮೂರು ಹಂತಗಳಲ್ಲಿ ಸಸಿಗಳನ್ನು ಪೂರೈಸಲಾಗುತ್ತಿದೆ. 1 ರಿಂದ 2 ವರ್ಷ ವಯಸ್ಸಿನ ಸಸಿಗಳ ಸಂಖ್ಯೆಯನ್ನು ಆಧರಿಸಿ ಉತ್ತೇಜಿಸಲಾಗುತ್ತದೆ. 50 ಸಸಿಗಳಿಂದ 200 ಸಸಿಗಳಿಗೆ ಪ್ರತಿ ಸಸಿಗೆ ರೂ.50/- ಮತ್ತು 201 ರಿಂದ 400 ಸಸಿಗಳಿಗೆ ರೂ.40 ರೂ.ಗೆ ವಿತರಿಸಲಾಗುತ್ತಿದ್ದು,  ಕನಿಷ್ಠ ಪೆÇ್ರೀತ್ಸಾಹದ ಮೊತ್ತ 10ಸಾವಿರ ನೀಡಲಾಗುತ್ತದೆ. 401 ರಿಂದ 625 ಸಸಿ ಖರೀದಿಸುವವರಿಗೆ  ಪ್ರತಿ ಸಸಿಗೆ ರೂ.30ರಂತೆ ದರ ನಿಗದಿಪಡಿಸಲಾಗಿದ್ದು, ಇದರ ಕನಿಷ್ಠ ಪೆÇ್ರೀತ್ಸಾಹಕ ಸಹಾಯಧನ 16ಸಾವಿರ ನಿಗದಿಪಡಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಯನ್ನು ಕಾಸರಗೋಡು ಸಾಮಾಜಿಕ ಅರಣ್ಯ ವಿಭಾಗದ ಕಛೇರಿ ಮತ್ತು ಅರಣ್ಯ ಇಲಾಖೆಯ ವೆಬ್‍ಸೈಟ್‍ನಿಂದ ಪಡೆಯಬಹುದಾಗಿದೆ. ಜುಲೈ 31 ರೊಳಗೆ ಸಾಮಾಜಿಕ ಅರಣ್ಯ ಇಲಾಖೆಗೆ ಭರ್ತಿ ಮಾಡಿದ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿಗಳನ್ನು ಕಾಸರಗೋಡು ಉದಯಗಿರಿ ಸಹಾಯಕ ಅರಣ್ಯ ಕನ್ಸರ್ವೇಟರ್ ಕಚೇರಿ ಅಥವಾ ಹೊಸದುರ್ಗ ಮತ್ತು ಉದಯಗಿರಿ ವಲಯ ಅರಣ್ಯ ಕಚೇರಿಗಳಿಗೆ ಸಲ್ಲಿಸಬಹುದಾಘಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994-255 234, 8547603836, 9447979152, 8547603838)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries