HEALTH TIPS

ಟೀಕೆಗಳ ಬಳಿಕ ಪ್ರಾಣಿಗಳ ಆಮದು ಮತ್ತು ರಫ್ತು ಕರಡು ಮಸೂದೆ ಹಿಂದೆಗೆದುಕೊಂಡ ಕೇಂದ್ರ

                 ವದೆಹಲಿ ಟೀಕೆಗಳ ಬಳಿಕ ಪ್ರಾಣಿಗಳ ಆಮದು ಮತ್ತು ರಫ್ತು ಕುರಿತು ಕರಡು ಮಸೂದೆಯನ್ನು ಕೇಂದ್ರ ಸರಕಾರವು  ಹಿಂದೆಗೆದುಕೊಂಡಿದೆ.

                ಜೂ.7ರಂದು ಜಾನುವಾರು ಮತ್ತು ಜಾನುವಾರು ಉತ್ಪನ್ನಗಳು (ಆಮದು ಮತ್ತು ರಫ್ತು) ಮಸೂದೆ, 2023 ರನ್ನು ಮಂಡಿಸಿದ್ದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು,ಸಾರ್ವಜನಿಕರಿಂದ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಕೋರಿತ್ತು.

            ಉದ್ದೇಶಿತ ಕಾನೂನು ಇತರ ದೇಶಗಳಿಗೆ ಜೀವಂತ ಪ್ರಾಣಿಗಳ ರಫ್ತು ಮತ್ತು ಆಮದಿಗೆ ಅವಕಾಶ ಕಲ್ಪಿಸಿತ್ತು. ಜಾನುವಾರುಗಳ ಪಟ್ಟಿಯಲ್ಲಿ ನಾಯಿಗಳು ಮತ್ತು ಬೆಕ್ಕುಗಳನ್ನೂ ಸೇರಿಸಲಾಗಿತ್ತು.

ಮಸೂದೆಯನ್ನು ವಿರೋಧಿಸಿದ್ದ ಹಲವಾರು ಪ್ರಾಣಿಪ್ರೇಮಿಗಳು ಮತ್ತು ನಾಗರಿಕ ಸಂಘಟನೆಗಳು, ಅದು ಪ್ರಾಣಿಹಿಂಸೆಯನ್ನು ಉತ್ತೇಜಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದರು.

                  ಪ್ರಸ್ತಾವಿತ ಕರಡನ್ನು ಅರ್ಥ ಮಾಡಿಕೊಳ್ಳಲು ಹಾಗೂ ಹೆಚ್ಚಿನ ಅಭಿಪ್ರಾಯಗಳು ಅಥವಾ ಸಲಹೆಗಳಿಗೆ ಅವಕಾಶ ನೀಡಲು ಹೆಚ್ಚಿನ ಕಾಲಾವಕಾಶವು ಅಗತ್ಯವಾಗಿದೆ ಎಂದು ತಾನು ಭಾವಿಸಿದ್ದೇನೆ ಎಂದು ಮಂಗಳವಾರ ತಿಳಿಸಿರುವ ಸಚಿವಾಲಯವು, ಉದ್ದೇಶಿತ ಕರಡಿನ ಕುರಿತು ಕಳವಳಗಳನ್ನು ವ್ಯಕ್ತಪಡಿಸಿ ಆಕ್ಷೇಪಗಳು ಸಲ್ಲಿಕೆಯಾಗಿವೆ. ಪ್ರಾಣಿ ಕಲ್ಯಾಣದ ಕುರಿತು ಸಂವೇದನೆ ಮತ್ತು ಭಾವನೆಗಳನ್ನು ಇವು ಒಳಗೊಂಡಿವೆ, ಹೀಗಾಗಿ ಮಸೂದೆಯ ಕುರಿತು ಇನ್ನಷ್ಟು ಸಮಾಲೋಚನೆಯು ಅಗತ್ಯವಾಗಿದೆ ಎಂದು ತಿಳಿಸಿದೆ.

                 ಪುಣೆಯಲ್ಲಿ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಮತ್ತು ನಾಗರಿಕರು ಮಸೂದೆಯ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದರು.

                ಸರಕುಗಳಂತೆ ಪ್ರಾಣಿಗಳ ಆಮದು ಮತ್ತು ರಫ್ತು ಕ್ರೌರ್ಯವಾಗಿದೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಗೌರಿ ವೌಲೇಖಿ, ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಪ್ರಾಣಿಗಳನ್ನು ಅವುಗಳಿಗೆ ಒಗ್ಗದ ವಾತಾವರಣಕ್ಕೆ ರಫ್ತು ಮಾಡಲಾಗುತ್ತಿದೆ. ಜೀವಂತ ಪ್ರಾಣಿಗಳ ಆಮದು ಮತ್ತು ರಫ್ತು ಜಾನುವಾರುಗಳ ವಂಶವಾಹಿಗಳನ್ನು ಹಾಳುಮಾಡುತ್ತದೆ ಮತ್ತು ವೈರಸ್ಗಳು ಹಾಗೂ ಇತರ ಕಾಯಿಲೆಗಳ ಹರಡುವಿಕೆಗೆ ಕಾರಣವಾಗುತ್ತದೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries