ಜಮ್ಮು: ಜಮ್ಮು ಮತ್ತು ಕಾಶ್ಮೀರ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ವಾರ್ಷಿಕ ಅಮರನಾಥ ಯಾತ್ರೆಗೆ ತೆರಳುವ ಯಾತ್ರಿಕರ ಮೊದಲ ತಂಡಕ್ಕೆ ಇಲ್ಲಿನ ಭಗವತಿ ನಗರ್ ಶಿಬಿರದಲ್ಲಿ ಚಾಲನೆ ನೀಡಿದ್ದಾರೆ.
ದಕ್ಷಿಣ ಕಾಶ್ಮೀರದ ಹಿಮಾಲಯದ 3,800 ಮೀಟರ್‌ನಷ್ಟು ಎತ್ತರದ ಪ್ರದೇಶದಲ್ಲಿರುವ ಶಿವನ ಗುಹಾ ದೇಗುಲಕ್ಕೆ ತೀರ್ಥಯಾತ್ರೆ ಕೈಗೊಳ್ಳಲು 3,400ಕ್ಕೂ ಅಧಿಕ ಯಾತ್ರಿಕರನ್ನೊಳಗೊಂಡ ಮೊದಲ ತಂಡ ಕಾಶ್ಮೀರದ ಮೂಲ ಶಿಬಿರಗಳಿಗೆ ಭಾರಿ ಭದ್ರತೆಯ ನಡುವೆ ತೆರಳಿದೆ.