ಮಲಪ್ಪುರಂ: ಸಾರ್ವಜನಿಕವಾಗಿ ಅವಾಚ್ಯ ಶಬ್ದ ಬಳಸಿ ವಿವಾದಕ್ಕೀಡಾಗಿದ್ದ ಯೂಟ್ಯೂಬ್ ವ್ಲಾಗರ್ 'ಟೊಪ್ಪಿ' ವಿರುದ್ಧ ಮತ್ತೆ ಪೋಲೀಸ್ ದೂರು ದಾಖಲಾಗಿದೆ.
‘ಟೊಪ್ಪಿ’ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿರುವ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಬೇಕು ಎಂಬುದು ದೂರಿನಲ್ಲಿ ಬೇಡಿಕೆಯಾಗಿದೆ. ಯುವಕರ ಗುಂಪೆÇಂದು ಜಿಲ್ಲಾ ಪೋಲೀಸ್ ವರಿಷ್ಠರಿಗೆ ದೂರು ನೀಡಿದೆ.
ವಿವಾದಿತ ಯೂಟ್ಯೂಬರ್ ವಿರುದ್ಧ ಕೊಳತ್ತೂರಿನವರಾದ ಅಮೀರ್ ಅಬ್ಬಾಸ್, ಕೋಡೂರಿನವರಾದ ಎಂ.ಟಿ ಮುರ್ಷಿದ್ ಮತ್ತು ಮುಹಮ್ಮದ್ಕುಟ್ಟಿ ಮಾಡಶ್ಸೆರಿ ದೂರು ದಾಖಲಿಸಿದ್ದಾರೆ. ಟೊಪ್ಪಿಯ ಅಶ್ಲೀಲ ಸಂಭಾಷಣೆಗಳ ವೀಡಿಯೊಗಳು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಉಳಿದುಕೊಂಡರೆ ಅಪ್ರಾಪ್ತರನ್ನು ದಾರಿತಪ್ಪಿಸಬಹುದು. ಮಲಪ್ಪುರಂನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರುದಾರರು ವಿವಾದಾತ್ಮಕ ವೀಡಿಯೊಗಳನ್ನು ಯೂಟ್ಯೂಬ್‍ನಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು. ಅಂತಹ ವೀಡಿಯೊಗಳು ಚಿಕ್ಕ ಮಕ್ಕಳನ್ನು ಅಪರಾಧ ಮಾಡಲು ಪ್ರೇರೇಪಿಸುತ್ತವೆ ಎಂದವರು ಬೊಟ್ಟುಮಾಡಿರುವರು.