ಉಪ್ಪಳ: ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ನೂತನ ಸಂಸತ್‍ನ ಉದ್ಘಾಟನೆಯನ್ನು ಪೆಲತ್ತಡ್ಕ ರಾಮಕೃಷ್ಣ ಭಟ್ ನೆರವೇರಿಸಿದರು. ಶಾಲಾ ಮಾರ್ಗದರ್ಶಕ ಕೃಷ್ಣ ನಾಯಕ್ ಅವರು ನೂತನ ಸಂಸತ್ತಿನ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ನಂತರ ಶಾಲಾ ಸಂಚಾಲಕ ಮಹಾಲಿಂಗ ಭಟ್ ಅವರು ಸಂಸತ್ತಿನ ಬಗ್ಗೆ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಮಾಹಿತಿ ನೀಡಿದರು. ಶಾಲಾ ಸಮಾಜ ವಿಜ್ಞಾನ ಶಿಕ್ಷಕ ಶೇಷು ಪಿ ರವರು ಸಂಸತ್ತು ಕಾರ್ಯನಿರ್ವಹಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಲಾ ಪ್ರಾಂಶುಪಾಲ ವಾಮನನ್ ಸ್ವಾಗತಿಸಿದರು. ಆಂಗ್ಲ ಅಧ್ಯಾಪಕ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.