ಕಾಸರಗೋಡು: ಉದುಮ ಎರೋಳ್ ಅಂಬಲತಿಂಕಲ್ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಆರಂಭಗೊಂಡಿತು. ಏರೋಲ್ ವಡಕ್ಕೆವೇಡು ಬಳಿಯ ತರವಾಡಿನಿಂದ ಆರಂಭಗೊಂಡ ಹಸಿರುವಾಣಿ ಸಮರ್ಪಣಾ ಮೆರವಣಿಗೆ ದೇವಸ್ಥಾನದ ವರೆಗೆ ನಡೆಯಿತು. ಇದೇ ಸಂದರ್ಭ ವಿವಿಧೆಡೆಯಿಂದ ಹಸಿರುವಣಿ ಸಮರ್ಪಣಾ ಮೆರವಣಿಗೆ ದೇವಸ್ಥಾನ ಬಂದು ಸೇರಿತು.
ಅರವತ್ ಕೆ.ಯು.ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ ನಡೆಯುತ್ತಿದೆ. ಪ್ರಸಿದ್ಧ ವಾಗ್ಮಿ ಕೊಪ್ಪಳ ಚಂದ್ರಶೇಖರನ್ ಅವರಿಂದ ಆಧ್ಯಾತ್ಮಿಕ ಉಪನ್ಯಾಸ, ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ ನಡೆಯಿತು. ಈ ಸಂದರ್ಭ ದೇವಾಲಯದ ಸಭಾಂಗಣ ಮತ್ತು ಯುಎಇ ಸಮಿತಿ ನಿರ್ಮಿಸಿದ ಮುಂಭಾಗದ ಪಡಿಪ್ಪುರೆ ಸಮರ್ಪಣಾ ಕಾರ್ಯ ನಡೆಯಿತು. ಜೂ. 20ರಂದು ಬೆಳಗ್ಗೆ 3.49 ರಿಂದ 4.32 ರವರೆಗೆ ದೇವಪ್ರತಿಷ್ಠೆ, ವಿವಿಧ ಕಲಶಾಭಿಷೇಕ ಮತ್ತು ಪೂಜೆ ನಡೆಯಲಿರುವುದು.