ನವದೆಹಲಿ: ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂನಲ್ಲಿ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಸೂರ್ಯಕಾಂತ್ ಅವರು ಸ್ಥಾನ ಪಡೆದಿದ್ದಾರೆ.
ನವದೆಹಲಿ: ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂನಲ್ಲಿ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಸೂರ್ಯಕಾಂತ್ ಅವರು ಸ್ಥಾನ ಪಡೆದಿದ್ದಾರೆ.
ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಹಾಗೂ ಅಜಯ್ ರಸ್ತೋಗಿ ಅವರು ಕ್ರಮವಾಗಿ ಜೂನ್ 16 ಮತ್ತು 17ರಂದು ನಿವೃತ್ತಿ ಹೊಂದಿದ್ದಾರೆ.
ನ್ಯಾಯಮೂರ್ತಿಗಳಾದ ಸಂಜಯಕಿಶನ್ ಕೌಲ್, ಸಂಜೀವ್ ಖನ್ನಾ ಅವರೂ ಕೊಲಿಜಿಯಂ ಸದಸ್ಯರಾಗಿದ್ದಾರೆ. ಸದಸ್ಯರ ಪೈಕಿ ನ್ಯಾಯಮೂರ್ತಿಗಳಾದ ಖನ್ನಾ, ಗವಾಯಿ ಹಾಗೂ ಸೂರ್ಯಕಾಂತ್ ಅವರು ಮುಂದಿನ ದಿನಗಳಲ್ಲಿ ಸಿಜೆಐ ಹುದ್ದೆಗೇರಲಿರುವುದು ಗಮನಾರ್ಹ.
ನ್ಯಾಯಮೂರ್ತಿ ವಿ.ರಾಮಸುಬ್ರಮಣಿಯನ್ ಗುರುವಾರ ನಿವೃತ್ತರಾಗಲಿದ್ದರೆ, ನ್ಯಾಯಮೂರ್ತಿ ಕೃಷ್ಣಮುರಾರಿ ಅವರು ಜುಲೈ 8ರಂದು ನಿವೃತ್ತರಾಗುವರು. ಹೀಗಾಗಿ, ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳ ಸಂಖ್ಯೆ 30ಕ್ಕೆ ಇಳಿಕೆಯಾಗಲಿದೆ. ಮಂಜೂರಾದ ಹುದ್ದೆಗಳ ಹುದ್ದೆ ಸಂಖ್ಯೆ 34.