ಕಾಸರಗೋಡು: ಯುವ ಪೀಳಿಗೆಯ ಉದ್ಯಮಶೀಲತೆಯ ಕನಸುಗಳಿಗಾಗಿ ಕೇರಳ ಸ್ಟಾರ್ಟ್‍ಅಪ್ ಮಿಷನ್ ಇನ್‍ಕ್ಯುಬೇಟರ್‍ಗಳನ್ನು ಕೋ ವರ್ಕಿಂಗ್ ಸ್ಪೇಸ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಕೇರಳ ಸ್ಟಾರ್ಟ್‍ಅಪ್ ಮಿಷನ್‍ನ ಲೀಪ್ ಯೋಜನೆ ಕಾಸರಗೋಡಿನಲ್ಲಿ ಚಾಲನೆ ನೀಡಲಾಯಿತು.
ಈ ಮೂಲಕ ಸ್ಕಿಲ್ ಪಾರ್ಕ್ ಉದ್ಯಮಿಗಳಿಗೆ ಮತ್ತೊಂದು ಅವಕಾಶದ ಬಾಗಿಲು ತೆರೆದುಕೊಳ್ಳುವಂತಾಗಿದೆ. ಲಾಂಚ್, ಎಂಪವರ್, ಆಕ್ಸಿಲರೇಟ್ ಮತ್ತು ಪೆÇ್ರೀಸ್ಪರ್(ಲೀಪ್)ಹೆಸರಿನಿಂದ ಕಾರ್ಯಾಚರಿಸಲಿರುವ ಕೇಂದ್ರದ ಮೂಲಕ ಕಾರ್ಯಕ್ಷೇತ್ರಗಳು, ಹೆಚ್ಚಿನ ವೇಗದ ಇಂಟರ್ನೆಟ್, ಸಭಾ ಕೊಠಡಿಗಳು ಮತ್ತು ಎಲ್ಲಾ ಆಧುನಿಕ ಸೌಕರ್ಯಗಳನ್ನು ಲೀಪ್‍ನಲ್ಲಿ ಅಳವಡಿಸಲಾಗಿದೆ. ಇನ್‍ಕ್ಯುಬೇಶನ್ ಸೆಂಟರ್‍ಗಳ ಮೂಲಕ ಸ್ಟಾರ್ಟ್‍ಅಪ್‍ಗಳು ತಜ್ಞರ ಸಲಹೆಯನ್ನು ಪಡೆಯಬಹುದು ಮತ್ತು ವೃತ್ತಿಪರರ ಉಪಸ್ಥಿತಿಯ ಮೂಲಕ ಹೊಸ ತಂತ್ರಜ್ಞಾನದ ಪ್ರವೃತ್ತಿಗಳ ಬಗ್ಗೆ ಸಂವಹನ ನಡೆಸಬಹುದಾಗಿದೆ.