ಕಾಸರಗೋಡು: ಮಕ್ಕಳ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಮೇಲಾಂಕೋಟ್ ಎ.ಸಿ ಕಣ್ಣನ್ ನಾಯರ್ ಸ್ಮಾರಕ ಸರ್ಕಾರಿ ಯುಪಿ ಶಾಲೆ ಹಾಗೂ ಆನಂದಾಶ್ರಮ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಜೀವನಂ 2023 ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಯೋಜನೆಯನ್ವಯ ಶಾಲೆಯ ಎಲ್ಲಾ 480 ಮಕ್ಕಳ ಸಂಪೂರ್ಣ ಆರೋಗ್ಯ ದಾಖಲೆಗಳನ್ನು ಸಂಗ್ರಹಿಸಲಾಯಿತು. ಮಕ್ಕಳ ತೂಕ, ಎತ್ತರ, ರಕ್ತ ಪರೀಕ್ಷೆ, ದೈಹಿಕ ಕ್ಷಮತೆ ಸೇರಿದಂತೆ ಅನೇಕ ವಿಷಯಗಳನ್ನು ಪರಿಶೀಲಿಸಲಾಗುತ್ತದೆ. ಶಾಲೆಯು ದಾಖಲೆಗಳನ್ನು ಇಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಇದು ಸಹಕರಿಯಾಗುತ್ತಿದೆ. ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸುಮಾರು 20 ಸಹೋದ್ಯೋಗಿಗಳು ಆರೋಗ್ಯ ತಪಾಸಣೆ ನಡೆಸಿದರು. ಶಾಲೆಯಲ್ಲಿ ನಡೆದ ಶಿಬಿರವನ್ನು ಪುರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಿ.ಜಯನ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಜನ್ ಡಾ.ಕೆ.ವಿದ್ಯಾ ಆಶಯ ಭಾಷಣ ಮಾಡಿದರು. ಪ್ರಭಾರಿ ಎಚ್‍ಐ ಪಿ.ಅಶೋಕನ್, ಜೆಎಚ್‍ಐ ಸಿ.ಸುನೀಲ್‍ಕುಮಾರ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಕೆ.ಅನಿಲಕುಮಾರ್ ಸ್ವಾಗತಿಸಿದರು. ಕೆ.ವಿ.ಸೈಜು ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಆರೋಗ್ಯ ರಕ್ಷಣಾ ಕ್ರೀಡಾಕೂಟ ನಡೆಯಿತು.