HEALTH TIPS

ಇರುವೆಗಳು ಕಿರಿಕಿರಿ ನೀಡುತ್ತಿವೆಯೇ? ನೀವು ಸುಲಭವಾಗಿ ನಿಯಂತ್ರಿಸಬಹುದು: ಕೇವಲ ನಾಲ್ಕು ಅಡಿಗೆಮನೆ ವಸ್ತುಗಳು ಸಾಕು

              ಮಳೆಗಾಲ ಬಂತೆಂದರೆ ಮತ್ತೆ ಕೇಳುವಂತೆಯೇ ಇಲ್ಲ!. ನಮ್ಮ ಗ್ರಾಮೀಣ ಪ್ರದೇಶಗಳ ಎಲ್ಲಾ ಮನೆಗಳಲ್ಲೂ ಸಾಮಾನ್ಯ ಕೇಳಿಬರುವ ದೂರು ಇರುವೆ ಕಾಟ. ಗುಂಪು ಗುಂಪಾಗಿ ಆಗಮಿಸುವ ಇರುವೆಗಳ ತಂಡ ಮನೆಯ ಮೂಲೆ ಮೂಲೆ, ಆಹಾರದ ಪಾತ್ರೆಗಳು ಸೇರಿದಂತೆ ಹಲವೆಡೆ ತೊಂದರೆ ನೀಡುತ್ತದೆ. ಹಲವು ಸಂದರ್ಭ ಹತಾಶೆಗೂ ಕಾರಣವಾಗುತ್ತದೆ. 

           ಮನೆಯೊಳಗಿನ ಜಾಗದಲ್ಲಿ ಗೂಡು ಕಟ್ಟಿಕೊಂಡು ನೆಲೆಸಿದರೆ ಅವುಗಳನ್ನು ಓಡಿಸುವುದು ಸುಲಭವಲ್ಲ. ಮಳೆಗಾಲ ಬಂತೆಂದರೆ ಸಾಮಾನ್ಯವಾಗಿ ಇವುಗಳ ಕಾಟ ಹೆಚ್ಚುತ್ತದೆ. ಇರುವೆಗಳ ನಿವಾರಣೆಗೆ ವಿಷಕಾರಿ ಪುಡಿಯನ್ನು ಸಿಂಪಡಿಸುವ ಮೂಲಕ ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಾರೆ, ಆದರೆ ಕೆಲವು ಸಂದರ್ಭಗಳಲ್ಲಿ ಇದು ಅಪಾಯವನ್ನು ಆಹ್ವಾನಿಸುತ್ತದೆ. ಈ ನಿಟ್ಟಿನಲ್ಲಿ ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಕೆಲವು ವಸ್ತುಗಳನ್ನು ಬಳಸಿದರೆ ಇರುವೆಗಳ ಕಾಟವನ್ನು ಶಾಶ್ವತವಾಗಿ ತಪ್ಪಿಸಬಹುದು. ನೀವು ಕೇವಲ ಮೂರು ವಿಷಯಗಳೊಂದಿಗೆ ಇರುವೆಗಳನ್ನು ತೊಡೆದುಹಾಕಬಹುದು.

                     ನಿಂಬೆರಸ:

       ಇರುವೆಗಳು ಬರುವ ಸ್ಥಳಗಳಲ್ಲಿ ನಿಂಬೆ ರಸವನ್ನು ಸುರಿಯಿರಿ ಅಥವಾ ಅವುಗಳ ಸಿಪ್ಪೆಗಳನ್ನು ಹಾಕಿ. ಇರುವೆಗಳು ನಿಂಬೆಹಣ್ಣಿನ ವಾಸನೆಯನ್ನು ದಾಟಲು ಸಾಧ್ಯವಿಲ್ಲ. ಇದರಿಂದ ತೊಂದರೆ ನಿವಾರಣೆಯಾಗುತ್ತದೆ. ಹಾಗೆಯೇ ಲಿಂಬೆ ರಸವನ್ನು ನೀರಿನಲ್ಲಿ ಹಿಂಡಿ ಆ ನೀರಿಂದ ನೆಲವನ್ನು ಒರೆಸಿದರೆ ಇರುವೆಗಳು ಮನೆಯೊಳಗೆ ಬರುವುದಿಲ್ಲ.

                     ಮೆಣಸು:

   ಇರುವೆಗಳು ಸಿಹಿ ಪ್ರಿಯವಾದವುಗಳು. ಅವುಗಳಿಗೆ ಹುಳಿ, ಖಾರ ಮತ್ತು ಕಹಿ ರುಚಿಗಳು ಇಷ್ಟವಾಗುವುದಿಲ್ಲ. ಆದ್ದರಿಂದ ಇವುಗಳಿರುವ ಜಾಗಗಳಲ್ಲಿ ಒಂದಿಷ್ಟು ಕಾಳುಮೆಣಸಿನ ಪುಡಿ ಎರಚಿದರೆ ಇರುವೆಗಳು ಪ್ರವೇಶಿಸುವುದಿಲ್ಲ. ಪುಡಿಮಾಡಿದ ಕಾಳುಮೆಣಸು ಅಥವಾ ಮೆಣಸಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ನಂತರ ಸಿಂಪಡಿಸುವುದರಿಂದ ಅವುಗಳ ಉಪದ್ರವವನ್ನು ಹೋಗಲಾಡಿಸಬಹುದು.

                    ಉಪ್ಪು:

      ಇವುಗಳಲ್ಲದೆ ಇರುವೆಗಳನ್ನು ಹೋಗಲಾಡಿಸಲು ಉಪ್ಪು ಕೂಡ ತುಂಬಾ ಪರಿಣಾಮಕಾರಿಯಾಗಿದೆ. ನೀರನ್ನು ಚೆನ್ನಾಗಿ ಕುದಿಸಿದ ನಂತರ, ಉಪ್ಪು ಪುಡಿಯನ್ನು ಸೇರಿಸಿ ಮತ್ತು ನೀರಿನಲ್ಲಿ ಕರಗಿಸಿ. ಇರುವೆಗಳು ಇರುವ ಜಾಗಕ್ಕೆ ಈ ದ್ರಾವಣವನ್ನು ಸಿಂಪಡಿಸಬಹುದು.

               ಎಲ್ಲಕ್ಕಿಂತಲೂ ಮುಖ್ಯವಾಗಿ ಮನೆ, ಪರಿಸರ ಒಪ್ಪ ಓರಣವಾಗಿದ್ದರೆ ಇರುವೆ ಸಹಿತ ಇತರ ಜೀವ-ಜಂತುಗಳು ಮನೆಯತ್ತ ಖಂಡಿತಾ ಸುಳಿಯದು. ಮನೆಯೊಳಗೆ-ಹೊರಗೆ ನೈರ್ಮಲ್ಯ ಕಾಪಿಟ್ಟರೆ ಇರುವೆಗಳು ಅಷ್ಟೊಂದು ಸಮಸ್ಯೆಯಾಗದು. ಹಳೆಯ ಮನೆಗಳಾಗಿದ್ದರೆ; ಅದೂ ಮಣ್ಣಿನ ಗೋಡೆ-ನೆಲದವುಗಳಾಗಿದ್ದರೆ ಇರುವೆಗಳು ಅತೀ ಹೆಚ್ಚು. ಇದರ ನಿವಾರಣೆಗೆ ಅವುಗಳ ಮೂಲ ಪತ್ತೆಹಚ್ಚಿ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.

          ಅಷ್ಟಕ್ಕೂ ಇಷ್ಟು ದೊಡ್ಡ ಮನುಷ್ಯ ಪುಟ್ಟ ಇರುವೆಗೆ ಹೆದರುವುದು ಅಂದರೇನು? ಅಲ್ಲವೇ?




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries