ತಿರುವನಂತಪುರಂ: ಕಸ್ಟಮ್ಸ್ ಅಧಿಕಾರಿಗಳು ಭಾಗಿಯಾಗಿರುವ ತಿರುವನಂತಪುರಂ ವಿಮಾನ ನಿಲ್ದಾಣದ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸಿಬಿಐ ಸಿದ್ಧತೆ ನಡೆಸಿದೆ. ಇದಕ್ಕಾಗಿ ರಾಜ್ಯ ಸರ್ಕಾರದ ಅನುಮತಿ ಪಡೆಯಲಾಗುವುದು. ರಾಜ್ಯದಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶಾಮೀಲಾಗಿರುವ ಘಟನೆಗಳು ಪುನರಾವರ್ತನೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸಲು ನಿರ್ಧರಿಸಿದೆ.
ಕಸ್ಟಮ್ಸ್ ಇನ್ಸ್‍ಪೆಕ್ಟರ್‍ಗಳಾದ ಅನೀಶ್ ಮೊಹಮ್ಮದ್ ಮತ್ತು ಎಸ್ ನಿತಿನ್ ಒಳಗೊಂಡ ಚಿನ್ನ ಕಳ್ಳಸಾಗಣೆ ಪ್ರಕರಣವು ಹೊರಬಂದ ನಂತರ ಸಿಬಿಐ ವಿವರಗಳನ್ನು ಕೇಳಿತ್ತು. ಆದರೆ ಪ್ರಕರಣದ ಹೆಚ್ಚಿನ ವಿವರಗಳನ್ನು ಕಂಡುಹಿಡಿಯಲು ಸಿಬಿಐ ತನಿಖೆಯನ್ನು ತೀವ್ರಗೊಳಿಸಿದೆ. ಸಿಬಿಐ ಸ್ವತಂತ್ರವಾಗಿ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ಸಾಮಾನ್ಯ ಅನುಮತಿಯನ್ನು ಮನ್ನಾ ಮಾಡಿತ್ತು. ಹಾಗಾಗಿ ತನಿಖೆಗೆ ಸರ್ಕಾರದ ಅನುಮತಿ ಅಗತ್ಯ. ಸರಕಾರಕ್ಕೆ ಸಂಬಂಧಿಸಿದ ಅನೇಕ ಭ್ರμÁ್ಟಚಾರ ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಸರಕಾರದಿಂದ ಅನುಮತಿ ಕೋರಿದಾಗ ಸರಕಾರ ಅದನ್ನು ನಿರಾಕರಿಸುತ್ತದೆ ಅಥವಾ ಅನುಮತಿ ನೀಡದೆ ವಿಳಂಬ ಮಾಡುತ್ತದೆ.
ಕಸ್ಟಮ್ಸ್ ತಪಾಸಣೆ ನಡೆಸಿ ಅಬುಧಾಬಿಯಿಂದ ತಂದಿದ್ದ ನಾಲ್ಕೂವರೆ ಕಿಲೋ ಚಿನ್ನವನ್ನು ಡಿಆರ್ ಐ ವಶಪಡಿಸಿಕೊಂಡಾಗ ಅನೀಶ್ ಮುಹಮ್ಮದ್ ಮತ್ತು ನಿತ್ ಎಂಬುವರ ನೆರವಿನಿಂದ ಈ ಹಿಂದೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ಕಳ್ಳಸಾಗಣೆ ಗ್ಯಾಂಗ್ ಹೇಳಿಕೆ ತೆಗೆದುಕೊಂಡಿದ್ದರೂ ಪ್ರಕರಣದ ಆರಂಭದಲ್ಲಿ ಅಧಿಕಾರಿಗಳಿಗೆ ರಕ್ಷಣೆ ನೀಡಲಾಗಿತ್ತು. ಘಟನೆಯ ಕುರಿತು ಸಿಬಿಐ ಮಾಹಿತಿ ಕೇಳಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗಿದೆ.