ಎರ್ನಾಕುಳಂ: ಮಹಾರಾಜ ಕಾಲೇಜಿನ ನಕಲಿ ಕೆಲಸದ ಅನುಭವ ಪ್ರಮಾಣ ಪತ್ರ ಸೃಷ್ಟಿಸಿದ್ದ ಎಸ್.ಎಫ್.ಐ ಮುಖಂಡೆ ಕೆ.ವಿದ್ಯಾ ಅವರಿಗೆ ಹಿನ್ನಡೆಯಾಗಿದೆ.
ಕೆ. ವಿದ್ಯಾ ವರ ಪಿ.ಎಚ್.ಡಿ ಮಾರ್ಗದರ್ಶಿ ಬಿಚು ಮಲಯಿಲ್ ಸಂಶೋಧನಾ ಮಾರ್ಗದರ್ಶಿಯಾಗಿ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿರುವರು. ವಿದ್ಯಾ ನಿರಪರಾಧಿ ಎಂದು ಸಾಬೀತು ಪಡಿಸುವವರೆಗೂ ದೂರ ಸರಿಯುವುದಾಗಿ ಬಿಚ್ಚು ಮಲೈಲ್ ಹೇಳಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪತ್ರ ಕಳುಹಿಸಲಾಗಿದೆ.
ನಿಯಮಾವಳಿಗಳನ್ನು ಉಲ್ಲಂಘಿಸಿ ಪ್ರವೇಶ ಪಡೆದ ವಿದ್ಯಾರ್ಥಿಗೆ ಮಾರ್ಗಸೂಚಿಗಳನ್ನು ನೀಡುವುದರಿಂದ ಇತರ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಕಾನೂನುಬದ್ಧವಾಗಿ ನಿರಪರಾಧಿ ಎಂದು ಸಾಬೀತುಪಡಿಸುವವರೆಗೆ ವಿದ್ಯಾರಿಗೆ ಮಾರ್ಗಸೂಚಿಗಳನ್ನು ನೀಡಲು ಸಾಧ್ಯವಿಲ್ಲ. ಮಲಯಾಳಂ ವಿಭಾಗದ ಎಚ್‍ಒಡಿ ಮೂಲಕ ಅಧಿಕೃತವಾಗಿ ವಿಸಿಗೆ ಈ ಕುರಿತು ನಿರ್ಧಾರ ತಿಳಿಸಲಾಗಿದೆ ಎಂದು ಬಿಚ್ಚು ಮಲಯಿಲ್ ತಿಳಿಸಿದರು.
2020ರಲ್ಲಿ ಕೆ.ವಿದ್ಯಾ ಕಾಲಡಿ ವಿಶ್ವವಿದ್ಯಾನಿಲಯಕ್ಕೆ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿದ್ದರು. ವಿದ್ಯಾ ಅವರ ಪಿಎಚ್‍ಡಿ ಪ್ರವೇಶದ ಮಾನದಂಡ ಮೀರಿದೆ ಎಂಬ ಆರೋಪದ ಬಗ್ಗೆ ವಿಚಾರಣೆ ಆರಂಭಿಸಲಾಗಿದೆ. ಪಾಲಕ್ಕಾಡ್‍ನ ಅಟ್ಟಪ್ಪಾಡಿ ಸರ್ಕಾರಿ ಕಾಲೇಜಿನಲ್ಲಿ ಹಂಗಾಮಿ ಶಿಕ್ಷಕರ ನೇಮಕಾತಿಗೆ ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣದಲ್ಲಿ ಎಸ್‍ಎಫ್‍ಐ ಮಹಿಳಾ ನಾಯಕಿಯ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದೆ.