ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯಲ್ಲಿ ವಾಚನ ಮಾಸಾಚರಣೆಯ ಉದ್ಘಾಟನೆ ಮತ್ತು ಗ್ರಂಥಾಲಯ ಚಟುವಟಿಕೆಗಳಿಗೆ ಚಾಲನಾ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಹಾಗೂ ಕಲಾವಿದ ಶೇಖರ ಶೆಟ್ಟಿ ಬಾಯಾರ್ ಇವರು ನೆರವೇರಿಸಿದರು. ವಾಚನಾ ಮಾಸಾಚರಣೆಯ ಸರಣಿ ಕಾರ್ಯಕ್ರಮಗಳನ್ನು ದಿನ ಪತ್ರಿಕೆಯನ್ನು ಮಕ್ಕಳಿಗೆ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಶೇಖರ ಶೆಟ್ಟಿ ಅವರು 'ಮಕ್ಕಳು ಪುಸ್ತಕಗಳನ್ನು ಓದಿ ಸ್ವತಂತ್ರರಾಗಿ ಕತೆ ಕವಿತೆಗಳನ್ನು ರಚನೆ ಮಾಡಬೇಕೆಂದು ಕರೆ ನೀಡಿದರು. ಶಾಲಾ ಗ್ರಂಥಾಲಯದ ಚಟುವಟಿಕೆಗಳಿಗೆ ಚಾಲನೆ ನೀಡಿ ಮಕ್ಕಳೊಂದಿಗೆ ಆಸ್ವಾದನಾ ಟಿಪ್ಪಣಿ ಬಗ್ಗೆ ಮಾಹಿತಿ ನೀಡಿ ಪುಟಾಣಿ ಮಕ್ಕಳಿಗೆ ಅಭಿನಯ ಗೀತೆಯನ್ನು ಹಾಡಿಸಿ ಮನರಂಜಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್.ಯಂ. ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.ನಂತರ ಶಾಲಾ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ದಾನ ಮಾಡಿದ ಪುಸ್ತಕಗಳನ್ನು ಅತಿಥಿಗಳು ಸ್ವೀಕರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ಶಾಲಾ ಲೈಬ್ರರಿ ಸಂಚಾಲಕ ಸುನಿಲ್ ಕುಮಾರ್ ಯಂ ವಂದಿಸಿದರು. ಶಾಲಾ ಲೈಬ್ರರಿ ಸಹಸಂಚಾಲಕ ಅಶೋಕ್ ಕುಮಾರ್ ಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. ವಾಚನಾ ಮಾಸಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ರಚನೆ, ಚಿತ್ರ ರಚನೆ,ಭಾಷಣ,ರಸಪ್ರಶ್ನೆ ಸ್ಮರಣೆ ಶಕ್ತಿ ಮುಂತಾದ ಹಲವಾರು ಸ್ಪರ್ಧೆಗಳು ಒಂದು ವಾರಗಳ ಕಾಲ ನಡೆಯಲಿದೆ.