ಕೊಚ್ಚಿ: ಪ್ರತಿಕೂಲ ಹವಾಮಾನದ ನಡುವೆಯೂ ಉಸಿರಾಟದ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಎರಡೂವರೆ ವರ್ಷದ ಮಗುವನ್ನು ಲಕ್ಷದ್ವೀಪದ ಅಗತ್ತಿ ದ್ವೀಪದಿಂದ ಕೊಚ್ಚಿಗೆ ಭಾರತೀಯ ನೌಕಾಪಡೆಯು ಡಾರ್ನಿಯರ್ ವಿಮಾನದಲ್ಲಿ ಏರ್‌ಲಿಫ್ಟ್ ಮಾಡಿದೆ.
ಕೊಚ್ಚಿ: ಪ್ರತಿಕೂಲ ಹವಾಮಾನದ ನಡುವೆಯೂ ಉಸಿರಾಟದ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಎರಡೂವರೆ ವರ್ಷದ ಮಗುವನ್ನು ಲಕ್ಷದ್ವೀಪದ ಅಗತ್ತಿ ದ್ವೀಪದಿಂದ ಕೊಚ್ಚಿಗೆ ಭಾರತೀಯ ನೌಕಾಪಡೆಯು ಡಾರ್ನಿಯರ್ ವಿಮಾನದಲ್ಲಿ ಏರ್‌ಲಿಫ್ಟ್ ಮಾಡಿದೆ.
ಮಗು ಜ್ವರ, ನ್ಯೂಮೋನಿಯಾ ಮತ್ತು ಶ್ವಾಸಕೋಶದ ವೈಫಲ್ಯದಿಂದ ಬಳಲುತ್ತಿತ್ತು.
ಮಗುವನ್ನು ಐಸಿಯುವಿನಲ್ಲಿ ದಾಖಲಿಸಲಾಗಿದ್ದು, ಜೀವರಕ್ಷಕದ ನೆರವು ನೀಡಲಾಗಿದೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶದ ಕೋರಿಕೆಯ ಮೇರೆಗೆ ಲಕ್ಷದ್ವೀಪದ ನೌಕಾ ಅಧಿಕಾರಿಯಿಂದ ವೈದ್ಯಕೀಯ ಸ್ಥಳಾಂತರಕ್ಕೆ ನೆರವು ಕೋರಿ ದಕ್ಷಿಣ ನೇವಲ್ ಕಮಾಂಡ್ (ಎಸ್‌ಎನ್‌ಸಿ) ಕೊಚ್ಚಿಯಲ್ಲಿ ತುರ್ತು ಫ್ಯಾಕ್ಸ್ ಸ್ವೀಕರಿಸಿದ ಬಳಿಕ, ನೌಕಾಪಡೆಯು ತಕ್ಷಣವೇ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.