ಬದಿಯಡ್ಕ: ಎಡನೀರು ಸಮೀಪದ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರದ ಪ್ರಯುಕ್ತ ಜೀರ್ಣೋದ್ಧಾರ ನಿಧಿ ಕೂಪನ್‍ನ್ನು ಸಮಿತಿಯ ಗೌರವಾಧ್ಯಕ್ಷ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಶ್ರೀಕ್ಷೇತ್ರ ಪರಿಸರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದ ಮೊಕ್ತೇಸರ ಗಂಗಾಧರ ಬಲ್ಲಾಳ್ ಬೆಳ್ಳೂರು ಮೊದಲ ಕೂಪನ್ ಪಡೆದುಕೊಂಡರು.
ಬಳಿಕ ನಡೆದ ಸಭೆಯಲ್ಲಿ ಉದ್ಯಮಿ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಮಾತನಾಡಿ ಭಗವಂತನ ಸೇವೆ ಮಾಡುವ ಪುಣ್ಯ ಕಾರ್ಯದ ಮಹತ್ವವನ್ನು ತಿಳಿಸಿದರು. ಹಿರಿಯ ವೈದ್ಯ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಮಾತನಾಡಿದರು. ನವೀನ್ ಕುಮಾರ್ ಭಟ್ ಕುಂಜಾರಕಾನ ಅಧ್ಯಕ್ಷತೆ ವಹಿಸಿ ನಿಧಿಕೂಪನ್ ಕುರಿತು ಮಾಹಿತಿಗಳನ್ನು ನೀಡಿದರು. ಸಮಿತಿಯ ಕಾರ್ಯದರ್ಶಿ ಕೆ.ಎಂ. ಶರ್ಮಾ ಎಡನೀರು ಸ್ವಾಗತಿಸಿದರು.
ವಾಸುದೇವ ಭಟ್ ಚೂರಿಮೂಲೆ, ಕೆ.ವಿ.ಬಾಲಕೃಷ್ಣ ಕಳೇರಿ, ರಾಜನ್ ಮುಳಿಯಾರು, ಜಯರಾಮ ಭಟ್, ವಾಮನ ಆಚಾರ್ಯ, ಬಾಲಕೃಷ್ಣ ಆಚಾರಿ ವೀರಮೂಲೆ, ಸರಿತಾ ಪಾಲೇಕಾಲ್, ಶಾರದಾ ಟೀಚರ್ ಎಡನೀರು ಕೂಪನ್ ಸ್ವೀಕರಿಸಿದರು. ಊರ ಪರವೂರ ಭಕ್ತಾದಿಗಳು ಭಾಗವಹಿಸಿದ್ದರು. ವಿವಿಧ ಸಮಿತಿಗಳಿಗೆ ಕೂಪನ್ ನೀಡಲಾಯಿತು.