ಕುಂಬಳೆ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ 9ನೇ ವμರ್Áಚರಣೆ ಭಾಗವಾಗಿ ‘ಸಂಪರ್ಕ ಸೇ ಸಮರ್ಪಣ್’ ಕಾರ್ಯಕ್ರಮದ ಅಂಗವಾಗಿ ಕುಂಬಳೆ ಮಂಡಲದ 141ನೇ ಬೂತ್ ಸಮಿತಿ ವತಿಯಿಂದ ಹಿರಿಯ ಕಾರ್ಯಕರ್ತ ಹಾಗೂ ಕೃಷಿಕÀ ಮಂಜಪ್ಪ ಮೂಲ್ಯ ಹಾಗೂ ಪಾಂಬಾಡಿ ನಿವಾಸಿ ಬಟ್ಯ ಮೂಲ್ಯ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರದ ಯೋಜನೆಗಳ ಮಾಹಿತಿ ಕರ ಪತ್ರವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಕಾರ್ಯದರ್ಶಿ ಸ್ವಾಗತ್ ಸಿತಾಂಗೋಳಿ, ಒಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಮಹೇಶ್ ಪುಣಿಯೂರು, ಬೂತ್ ಕಾರ್ಯದರ್ಶಿ ಉದಯ ಚುಕ್ರಿ, ಕಾರ್ಯಕರ್ತರಾದ ರಾಮ ನೆಲ್ಲಿಯಡ್ಕ, ಗೋಪಾಲಕೃಷ್ಣ, ಉದಯ, ಜೀವನ್, ರಾಜಗೋಪಾಲ್, ಕಾರ್ಯಕರ್ತರು ಭಾಗವಹಿಸಿದರು.