ನವಜಾತ ಶಿಶುಗಳು ತುಂಬಾನೇ ಸೂಕ್ಷ್ಮ. ಹೀಗಾಗಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ತುಂಬಾನೇ ಮುಖ್ಯವಾಗುತ್ತದೆ. ಕೆಲವು ಮಕ್ಕಳಲ್ಲಿ ಹುಟ್ಟಿದ ಕೆಲವೇ ದಿನಗಳಲ್ಲಿ ಕಾಮಾಲೆ ರೋಗ (ಜಾಂಡಿಸ್) ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಹೆಚ್ಚಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಮಗುವಿನ ಕಣ್ಣು ಹಾಗೂ ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಪೋಷಕರು ಭಯಬೀತರಾಗೋದುಂಟು.
ನವಜಾತ ಶಿಶುಗಳು ತುಂಬಾನೇ ಸೂಕ್ಷ್ಮ. ಹೀಗಾಗಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ತುಂಬಾನೇ ಮುಖ್ಯವಾಗುತ್ತದೆ. ಕೆಲವು ಮಕ್ಕಳಲ್ಲಿ ಹುಟ್ಟಿದ ಕೆಲವೇ ದಿನಗಳಲ್ಲಿ ಕಾಮಾಲೆ ರೋಗ (ಜಾಂಡಿಸ್) ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಹೆಚ್ಚಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಮಗುವಿನ ಕಣ್ಣು ಹಾಗೂ ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಪೋಷಕರು ಭಯಬೀತರಾಗೋದುಂಟು.ನವಜಾತ ಶಿಶುವಿನಲ್ಲಿ ಜಾಂಡಿಸ್ ಕಾಣಿಸಿಕೊಳ್ಳೋದಕ್ಕೆ ಕಾರಣವೇನು?
ಹೆಚ್ಚಿನ ನವಜಾತ ಶಿಶುಗಳಲ್ಲಿ ಜಾಂಡಿಸ್ ಕಾಣಿಸಿಕೊಳ್ಳುತ್ತದೆ. ಏಕೆಂದರೆ ಮಕ್ಕಳು ಜನಿಸುವಾಗ ಅವರಲ್ಲಿ ವಯಸ್ಕರಿಗಿಂತ ಹೆಚ್ಚಿನ ರಕ್ತ ಕಣಗಳಿರುತ್ತದೆ. ರಕ್ತ ಕಣಗಳು ಹೆಚ್ಚು ಕಾಲ ಉಳಿಯುವುದಿಲ್ಲ ಮತ್ತು ದೇಹದಲ್ಲಿ ಇದು ಹೆಚ್ಚು ಬಿಲಿರುಬಿನ್ ಅನ್ನು ಉಂಟುಮಾಡುತ್ತದೆ. ಮಗು ಜನಿಸಿದ 2-4 ದಿನಗಳ ನಂತರ ಕಾಮಾಲೆ ರೋಗ ಕಾಣಿಸಿಕೊಳ್ಳುತ್ತದೆ. ಆದರೆ ಮುಂದಿನ ಎರಡು ವಾರಗಳಲ್ಲಿ ಹೆಚ್ಚಿನ ಮಕ್ಕಳು ಗುಣಮುಖರಾಗುತ್ತಾರೆ. ಕೆಲವೇ ಕೆಲವು ಮಕ್ಕಳಿಲ್ಲಿ ಮಾತ್ರ ಈ ರೋಗ ತೀವ್ರ ಸ್ವರೂಪಕ್ಕೆ ತಿರುಗುತ್ತದೆ.
ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಶಿಶುಗಳು ಅಕಾಲಿಕವಾಗಿ ಜನಿಸಿದರೆ ಅಥವಾ ನಿಯಮಿತವಾಗಿ ಸ್ತನ್ಯಪಾನ ಮಾಡದಿದ್ದರೆ ಕಾಮಾಲೆ ರೋಗ ಉಂಟಾಗುವ ಸಾಧ್ಯತೆಯಿದೆ. ಮಗುವಿನ ರಕ್ತದ ಗುಂಪು ತಾಯಿಯ ರಕ್ತಕ್ಕೆ ಹೊಂದಿಕೆಯಾಗದಿದ್ದರೆ ಕೂಡ ಈ ರೀತಿ ಆಗುತ್ತದೆ.
ಕಾಮಾಲೆ ರೋಗದ ಲಕ್ಷಣಗಳೇನು?
ನವಜಾತ ಶಿಶುಗಳಲ್ಲಿ ಕಾಮಾಲೆ ರೋಗದ ಲಕ್ಷಣ ಯಾವುದೆಂದರೆ ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು. ಮೊದಲು ಮುಖದ ಮೇಲಿಂದ ಪ್ರಾರಂಭವಾಗಿ ನಂತರ ಎದೆ ಮತ್ತು ಹೊಟ್ಟೆಯ ಮೇಲೆ ಕಾಣಿಸಿಕೊಳ್ಳುತ್ತದೆ. ನಂತರ ಕಾಲುಗಳು. ಚರ್ಮದ ಹೊರತಾಗಿ ಮಗುವಿನ ಕಣ್ಣುಗಳ ಬಿಳಿ ಭಾಗವು ಹಳದಿ ಬಣ್ಣಕ್ಕೆ ತಿರುಗುತ್ತದೆ.
ಈ ಸಮಯದಲ್ಲಿ ದೇಹದಲ್ಲಿ ಬಿಲಿರುಬಿನ್ ಮಟ್ಟ ಹೆಚ್ಚಾಗೋದ್ರಿಂದ ಮಗು ಹೆಚ್ಚಿನ ನಿದ್ರೆ ಮತ್ತು ಗಡಿಬಿಡಿಗೆ ಒಳಗಾಗುತ್ತದೆ. ಇನ್ನೂ ಮಕ್ಕಳು ಕಪ್ಪಿದ್ದರೆ ಕಪ್ಪು ಚರ್ಮದ ಮೇಲೆ ಕಾಮಾಲೆಯನ್ನು ಗುರುತಿಸುವುದು ಕಷ್ಟವಾಗಬಹುದು. ಇಂತಹ ಸಮಯದಲ್ಲಿ ಕಣ್ಣು ನೋಡಿ ಪತ್ತೆ ಹಚ್ಚಬಹುದು.
ವೈದ್ಯರ ಬಳಿ ಯಾವಾಗ ಹೋಗಬೇಕು?
ನವಜಾತ ಶಿಶುಗಳಲ್ಲಿ ಕಾಮಾಲೆ ರೋಗ ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗಂತ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕೆಲವೊಂದು ಸಲ ಎರಡು ವಾರಗಳ ನಂತರ ಅದರಷ್ಟಕ್ಕೆ ಕಡಿಮೆಯಾಗುತ್ತದೆ. ಆದರೆ ಇನ್ನೂ ಕೆಲವು ಮಕ್ಕಳಲ್ಲಿ ಇದು ಗಂಭೀರವಾಗುತ್ತದೆ. ಮಗುವಿನ ಆರೋಗ್ಯ ತುಂಬಾನೇ ಹದಗೆಡುತ್ತದೆ. ಮಗು ಎದೆಹಾಲನ್ನೂ ಕುಡಿಯೋದಿಲ್ಲ. ಮಗು ಇಡೀ ದಿನ ಮಲಗಿರುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸೋದು ಉತ್ತಮ.
ಮಕ್ಕಳಲ್ಲಿ ಕಾಮಾಲೆ ರೋಗದ ಅಪಾಯವನ್ನು ತಡೆಗಟ್ಟೋದು ಹೇಗೆ?
ಸ್ತನ್ಯಪಾನ ಮಾಡುವ ಶಿಶುಗಳು ಜೀವನದ ಮೊದಲ ಹಲವಾರು ದಿನಗಳವರೆಗೆ ದಿನಕ್ಕೆ ಎಂಟರಿಂದ 12 ಬಾರಿ ಸ್ತನ್ಯಪಾನ ಮಾಡಿಸಬೇಕು. ಇದರಿಂದ ಮಕ್ಕಳು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.
ಕಾಮಾಲೆ ರೋಗಕ್ಕೆ ಚಿಕಿತ್ಸೆ
ನಿಮ್ಮ ನವಜಾತ ಶಿಶುವಿಗೆ ಈಗಾಗಲೇ ಕಾಮಾಲೆ ಕಾಣಿಸಿಕೊಂಡಿದ್ದರೆ ನೀವು ಏನು ಮಾಡಬಹುದು ಅಂತ ನೋಡೋದಾದ್ರೆ :
- ಹೆಚ್ಚಾಗಿ ಸ್ತನ್ಯಪಾನ ಮಾಡುವುದು
- ವೈದ್ಯರು ಆಗಾಗ್ಗೆ ಆಹಾರ ಅಥವಾ ಪೂರಕವನ್ನು ಶಿಫಾರಸು ಮಾಡಬಹುದು
- ನೀಲಿ-ಹಸಿರು ವರ್ಣಪಟಲದಲ್ಲಿ ಬೆಳಕನ್ನು ಹೊರಸೂಸುವ ವಿಶೇಷ ದೀಪದ ಅಡಿಯಲ್ಲಿ ಮಗುವನ್ನು ಇರಿಸುವುದು
- ರೋಗ ತೀವ್ರ ಸ್ವರೂಪಕ್ಕೆ ತಿರುಗಿದಾಗ ಮಗುವಿಗೆ ರಕ್ತ ವರ್ಗಾವಣೆಯ ಅಗತ್ಯವಿರಬಹುದು.
ಜಾಂಡಿಸ್ ಅಥವಾ ಕಾಮಾಲೆ ರೋಗ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಹಾಗಂತ ಈ ಬಗ್ಗೆ ನಿರ್ಲಕ್ಷ್ಯ ಮಾಡೋದಕ್ಕೆ ಹೋಗಬೇಡಿ. ಈ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಂಡು ಮಗುವಿನ ಆರೋಗ್ಯ ಕಾಪಾಡಿ.