ಕಾಸರಗೋಡು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ನಿರ್ದೇಶಿಸಿದೆ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಎಬಿಸಿ ಕೇಂದ್ರಗಳು ಶೀಘ್ರ ಕಾರ್ಯಾರಂಭಿಸಲಿದ್ದು, ಇದರ ಚಟುವಟಿಕೆ ನಂತರ ಬೀದಿ ನಾಯಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸುಳ್ಯ ಬಸ್ ಸಂಚಾರ ಪುನರಾರಂಭ:
ಕೋವಿಡ್ ಅವಧಿಯಲ್ಲ ಸ್ಥಗಿತಗೊಂಡಿರುವ ಪಾಣತ್ತೂರು ಸುಳ್ಯ ಕೆಎಸ್ಸಾರ್ಟಿಸಿ ಬಸ್ ಸೇವೆ ಶೀಘ್ರ ಪುನರಾರಂಭಿಸಲಾಗುವುದು. ಈ ಹಿಂದೆ ಎರಡು ಬಸ್ ಸಂಚಾರ ನಡೆಸುತ್ತಿದ್ದು, ಆರಂಭದಲ್ಲಿ ಒಂದು ಬಸ್ ಆರಂಭಿಸಲಾಗುವುದು ಎಂದು ಜಿಲ್ಲಾ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ. ಮಲೆನಾಡು ಪ್ರದೇಶಗಳಲ್ಲಿನ ಪ್ರಯಾಣ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸ್ಥಗಿತಗೊಂಡಿರುವ ಎಲ್ಲ ಬಸ್ ಟ್ರಿಪ್ ಗಳನ್ನು ಪುನರಾರಂಭಿಸಬೇಕು ಎಂದು ಶಾಸಕ ಇ.ಚಂದ್ರಶೇಖರನ್ ಹೇಳಿದರು.
ಟಾಟಾ ಆಸ್ಪತ್ರೆ:
ಟಾಟಾ ಆಸ್ಪತ್ರೆಯ ಉಪಕರಣಗಳನ್ನು ಜಿಲ್ಲೆಯ ಇತರೆ ಆಸ್ಪತ್ರೆಗಳಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಪ್ರಸ್ತಾವನೆ
ಟಾಟಾ ಟ್ರಸ್ಟ್ ಸರಕಾರಿ ಆಸ್ಪತ್ರೆಯ ಉಪಕರಣಗಳನ್ನು ಜಿಲ್ಲೆಯ ಇತರೆ ಆಸ್ಪತ್ರೆಗಳಿಗೆ ವರ್ಗಾಯಿಸಬೇಕು ಹಾಗೂ ಆಸ್ಪತ್ರೆಯ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ವಿಚ್ಛೇದಿಸುವಂತೆ ಶಾಸಕ ಸಿ.ಎಚ್.ಕುಞಂಬು ಸೂಚಿಸಿದರು. ಚಟುವಟಿಕೆ ಸ್ಥಗಿತಗೊಂಡಿರುವ ಆಸ್ಪತ್ರೆಯಲ್ಲಿ ವಿದ್ಯುತ್ ಶುಲ್ಕವೂ ಬಾಕಿ ಇರುವುದರಿಂದ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಟಾಟಾ ಆಸ್ಪತ್ರೆಯನ್ನು ಈ ಹಿಂದಿನಂತೆ ಚಟುವಟಿಕೆ ನಡೆಸುವಂತೆಮಾಡಿ, ಸಂಪೂರ್ಣವಾಗಿ ಕಾರ್ಯನಿರ್ವಹಿಸಿದಗ ವಿದ್ಯುತ್‍ಸಂಪರ್ಕ ಮರುಕಲ್ಪಿಸಬೇಕು. ಜತೆಗೆ ಆರೋಗ್ಯ ಇಲಾಖೆಗೆ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ಶಾಸಕರು ಸೂಚಿಸಿದರು.
ಕಾಸರಗೋಡು ಕೆಎಸ್‍ಆರ್‍ಟಿಸಿ ಡಿಪೆÇೀ ರಾತ್ರಿ ವೇಳೆಯಲ್ಲಿ ಸಮಾಜಘಾತುಕರ ತಾಣವಾಗುತ್ತಿದ್ದು, ರಾತ್ರಿ ವೇಳೆ ಸಂಚರಿಸುವ ಪ್ರಯಾಣಿಕರಿಗೆ ಇದು ಸವಾಲಾಗಿ ಪರಿಣಮಿಸುತ್ತಿದೆ. ಈ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದೊಳಗೆ ಪೊಲೀಸ್ ಔಟ್‍ಪೋಸ್ಟ್ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಎನ್.ಎ ನೆಲ್ಲಿಕುನ್ನು ಆಗ್ರಹಿಸಿದರು. ಪೆÇಲೀಸ್ ಏಡ್ ಪೆÇೀಸ್ಟ್ ಆರಂಭಿಸುವಂತೆ ಬಗ್ಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗೆ ಸೂಚಿಸುವುದಾಗಿ ಜಿಲ್ಲಾಧಿಕಾರಿ ಇನ್ಭಾಶೇಖರ್ ತಿಳಿಸಿದರು.
ಸಮುದ್ರಕೊರೆತದಿಂದ ಹಾನಿಯುಂಟಗುತ್ತಿರುವ ಕೊಯಿಪ್ಪಾಡಿ ಬೀಚ್‍ನ 300 ಮೀಟರ್ ಉದ್ದಕ್ಕೂ ಜಿಯೋಬ್ಯಾಗ್ ರಕ್ಷಣೆ ನೀಡಲಾಗುವುದು. ಟೆಟ್ರಾಪ್ಯಾಡ್‍ಗಳನ್ನು ಬಳಸಿಕೊಂಡು ಕೊಯಿಪ್ಪಾಡಿ ಮತ್ತು ಪೆರ್ವಾಡ್ ಕರಾವಳಿಯುದ್ದಕ್ಕೂ 2.7 ಕಿಮೀ ಸಂರಕ್ಷಣೆಗಾಗಿ ವಿಶ್ವಬ್ಯಾಂಕ್ ನಿಧಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಯೋಜನಾ ವರದಿ ಸಲ್ಲಿಸಲಾಗಿದೆ. ನಾಂಗಿ, ಕೊಪ್ಪಳ ಗಾಂಧಿನಗರದಲ್ಲೂ ತಡೆಗೋಡೆ ನಿರ್ಮಿಸಬೇಕು ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಜ್ ಪಾದೂರ್, ಜಿಲ್ಲಾ ಯೋಜನಾಧಿಕಾರಿ ಎ.ಎಸ್.ಮಾಯ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.