ಪೆರ್ಲ: ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲ್ ವಿಭಾಗದಲ್ಲಿ ಪ್ರಸ್ತುತ ಖಾಲಿ ಇರುವ ಎಚ್‍ಎಸ್‍ಟಿ ಗಣಿತ (ಕನ್ನಡ-1 ), ಎಚ್‍ಎಸ್‍ಎಸ್‍ಟಿ ಹಿಂದಿ (ಕನ್ನಡ-1) ಮತ್ತು ಯುಪಿಎಸ್‍ಟಿ ಕನ್ನಡ(1)ಹುದ್ದೆಗೆ ದಿನ ವೇತನ ಆಧಾರದ ಮೇಲೆ ತಾತ್ಕಾಲಿಕ ಶಿಕ್ಷಕರ ನೇಮಕಾತಿ ನಡೆಯಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಜೂ.6ರಂದು ಬೆಳಗ್ಗೆ 10.30ಕ್ಕೆ ಅಸಲಿ ಪ್ರಮಾಣಪತ್ರದೊಂದಿಗೆ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸುವಂತೆ ಮುಖ್ಯ ಶಿಕ್ಷಕರ ಪ್ರಕಟಣೆ ತಿಳಿಸಿದೆ.