ಮುಳ್ಳೇರಿಯ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ), ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಶ್ರೇಯೋಭಿವೃದ್ಧಿ ಸಂಘ ಹಾಗೂ ಮುಳ್ಳೇರಿಯ ವಿದ್ಯಶ್ರೀ ಶಿಕ್ಷಣ ಸಂಸ್ಥೆ ವತಿಯಿಂದ ಪತ್ರಿಕಾ ದಿನಾಚರಣೆ ಜುಲೈ 1ರಂದು ಬೆಳಗ್ಗೆ 9.30ಕ್ಕೆ ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಜರುಗಲಿದೆ.
ನಿವೃತ್ತ ಬ್ಯಾಂಕ್ ಅಧಿಕಾರಿ ಎಸ್. ಜಗನ್ನಾಥ ಶೆಟ್ಟಿ ಕುಂಬಳೆ ಸಮಾರಂಭ ಉದ್ಘಾಟಿಸುವರು. ಕೆಯುಡಬ್ಲ್ಯೂಜೆ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ದುರ್ಗಾಪ್ರಸಾದ್ ನಾಯರ್‍ಕೆರೆ ಪತ್ರಿಕಾ ದಿನಾಚರಣೆ ಸಂದೇಶ ನೀಡುವರು.
ಈ ಸಂದರ್ಭ ಬದಿಯಡ್ಕ ಪೇಟೆಯಲ್ಲಿ ದೀರ್ಘ ಕಾಲದಿಂದ ಪತ್ರಿಕಾ ವಿತರಣೆಯಲ್ಲಿ ತೊಡಗಿಸಿಕೊಂಡಿರುವ ಬಾಲಕೃಷ್ಣ ಪೊಯ್ಯೆಕಂಡ ಅವರನ್ನು ಗೌರವಿಸಲಾಗುವುದು. ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗಣೇಶ ವತ್ಸ, ಉದ್ಯಮಿ ಗಂಗಾಧರನ್ ನಾಯರ್ ಪಾಡಿ, ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ, ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುರುಷೋತ್ತಮ ಪೆರ್ಲ, ಹಿರಿಯ ಪತ್ರಕರ್ತ ಪ್ರಕಾಶ್ ಮಾಸ್ಟರ್ ಪಾಲ್ಗೊಳ್ಳುವರು.