ಕಾಸರಗೋಡು: ಓದುವಿಕೆಯಿಂದ ವಿಮುಖರಾಗುತ್ತಿರುವುದು ಬೌದ್ಧಿಕ ಕ್ಷಮತೆ ಕುಸಿತಕ್ಕೆ ಕಾರಣವಾಗಲಿರುವುದಾಘಿ ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ. ಅವರು ಕಾಸರಗೊಡು ಪ್ರೆಸ್‍ಕ್ಲಬ್ ವತಿಯಿಂದ ಪ್ರೆಸ್‍ಕ್ಲಬ್ ಕಟ್ಟಡದಲ್ಲಿ ಹೊಸದಾಗಿ ಆರಂಭಿಸಲಾದ ಕೆ.ಎಂ.ಅಹ್ಮದ್ ಮಾಧ್ಯಮ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ದೈನಂದಿನ ಜಂಜಾಟ ಹಾಗೂ ಅತಿಯಾದ ಮೊಬೈಲ್ ಬಳಕೆಯಿಂದ ಇಂದು ದಿನಪತ್ರಿಕೆ, ವಾರಪತ್ರಿಕೆ, ಪುಸ್ತಕ ಓದುವ ಹವ್ಯಾಸ ಕುಂಠಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದು ತಮ್ಮ ಜ್ಞಾನಭಂಡಾರ ವಋದ್ಧಿಸಿಕೊಳ್ಳಲು ಸಹಕಾರಿ ಎಂದು ತಿಳಿಸಿದರು.
ಪ್ರೆಸ್‍ಕ್ಲಬ್‍ನಲ್ಲಿ ಆರಂಭಿಸಲಾದ 'ಬಾಲಕೃಷ್ಣನ್ ಮಾಂಗಾಡ್ ಸ್ಮಾರಕ ಗ್ರಂಥಾಲಯ ಮತ್ತು ವಾಚನಾಲಯ'ದ ಪುಸ್ತಕ ಸಂಗ್ರಹ ಅಭಿಯಾನವನ್ನು ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಅಂಬಿಕಾಸುತನ್ ಮಾಙËಡ್ ಉದ್ಘಾಟಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಪಿ ದಾಮೋದರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರೆಸ್‍ಕ್ಲಬ್ ಕಾರ್ಯದರ್ಶಿ ಕೆ.ವಿ.ಪದ್ಮೇಶ್ ಸ್ವಾಗತಿಸಿದರು. ಸಂಶೋಧನಾ ಕೇಂದ್ರದ ನಿರ್ದೇಶಕ ಸನ್ನಿ ಜೋಸೆಫ್ ವಂದಿಸಿದರು.