ಕಾಸರಗೋಡು : ದೇವಸ್ಥಾನ ಮತ್ತು ಮಠಗಳ ಅಭಿವೃದ್ಧಿ ಸಮಾಜದ ಉನ್ನತಿಯ ಸಂಕೇತವಾಗಿದೆ ಎಂದು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮಿ ತಿಳಿಸಿದ್ದಾರೆ. ಅವರು ತಮ್ಮ ಚಾತುರ್ಮಾಸ್ಯದ ಪೂರ್ವಭಾವೀ ಕ್ಷೇತ್ರ ಸಂದರ್ಶನದ ಅಂಗವಾಗಿ ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದರು. ಮಹಾ ಸಂಸ್ಥಾನ ಮತ್ತು ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ತೊಡಗಿಸಿಕೊಳ್ಳುವಂತೆ ತಿಳಿಸಿದ ಅವರು ಸಮಾಜದ ಯುವ ಪೀಳಿಗೆ ಇನ್ನಷ್ಟು ಸಮಾಜದ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರು ಅವರು ಪ್ರಸ್ತಾವಿಕ ಮಾತುಗಳನ್ನಾಡಿ, ಚಾತುರ್ಮಾಸ್ಯದ ಮಹತ್ವ ಸಮಾಜದ ಪಾಲ್ಗೊಳ್ಳುವಿಕೆ ಮತ್ತು ವಿವಿಧ ಕಾರ್ಯಕ್ರಮಗಳ ಸೇವಾ ವಿವರಣೆಯನ್ನು ವಿವರಿಸಿದರು.
ಆನೆಗುಂದಿ ಶ್ರೀಗಳು ವಾಡಿಕೆಯಂತೆ ಮಧೂರು,ಕುಂಬಳೆ,ಬಂಗ್ರಮಂಜೇಶ್ವರ ಮತ್ತು ಕೋಟೆಕಾರು ಶ್ರೀ ಕಾಳಿಕಾಂಬಾ ದೇವಸ್ಥಾನ ಸಂದರ್ಶಿಸಿದರು.
ಆನೆಗುಂದಿ ಶ್ರೀಗಳವರ 19ನೇ ವರ್ಷದ ಶೋಭಕ್ಕøತ್ ಸಂವತ್ಸರದ ಚಾತುರ್ಮಾಸ್ಯವು 2023ರ ಜುಲೈ 3 ರಿಂದ ಸೆಪ್ಟೆಂಬರ್ 29 ರ ತನಕ ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನದಲ್ಲಿ ನಡೆಯಲಿದೆ. ಈ ಸಂದರ್ಭ ಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆಯನ್ನು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ ಅವರು ಮಧೂರು ಶ್ರೀ ಕಾಳಿಕಾಂಬಾ ಸೇರಿದಂತೆ ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು.
ಅಸೆಟ್ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು, ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಕೆಮ್ಮಣ್ಣು ಗಣೇಶ ಆಚಾರ್ಯ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಕಾರ್ಯದರ್ಶಿಗಳಾದ ವಕೀಲ ಕೆ.ಎಂ ಗಂಗಾಧರ ಆಚಾರ್ಯ ಕೊಂಡೆವೂರು, ಕನ್ಯಾನ ಜನಾರ್ದನ ಆಚಾರ್ಯ, ಸದಸ್ಯರಾದ ಪೆರ್ಣೆ ಕೆ ಎಂ ಮಧುಸೂದನ ಆಚಾರ್ಯ ಕಾಸರಗೋಡು, ಅಸೆಟ್ ಕೇರಳ ಪ್ರತಿನಿಧಿಗಳಾದ ಜನಾರ್ದನ ಆಚಾರ್ಯ ಬಜಕೂಡಲು, ವಿಘ್ನೇಶ್ ಆಚಾರ್ಯ ಉಪಸ್ಥಿತರಿದ್ದರು.