ಮಲಪ್ಪುರಂ: ಪಂಚಾಯತ್ ಕಚೇರಿಗೆ ಯುವಕ ಬೆಂಕಿ ಹಚ್ಚಿದ ಘಟನೆಯೊಂದು ನಡೆದಿದೆ. ಮಲಪ್ಪುರಂ ಕೀಜಾತೂರು ಪಂಚಾಯತ್ ಕಚೇರಿಯಲ್ಲಿ ಹಿಂಸಾಚಾರ ನಡೆದಿದೆ.
ಲೈಫ್ ಮಿಷನ್ ಪ್ಲಾನ್ ನಲ್ಲಿ ಸೇರ್ಪಡೆಯಾಗದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿಯಲಾಗಿದೆ. ಹಿಂಸಾಚಾರ ನಡೆಸಿದ ವ್ಯಕ್ತಿಯನ್ನು ಪೆÇಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ ಪಂಚಾಯತ್ ನೌಕರರಿಗೆ ಯಾವುದೇ ಗಾಯಗಳಾಗಿಲ್ಲ. ಕಂಪ್ಯೂಟರ್‍ಗಳು ಹಾನಿಗೊಂಡಿವೆ. ಬೆಂಕಿ ಹಚ್ಚಿದ ಯುವಕ ಲೈಫ್ ಯೋಜನೆಯಡಿ ಮನೆಗಾಗಿ ಅರ್ಜಿ ಸಲ್ಲಿಸಿದ್ದ. ಇದಕ್ಕೆ ಸಂಬಂಧಿಸಿದ ವಿವಾದಗಳು ಮತ್ತು ಸಮಸ್ಯೆಗಳು ಹಿಂಸಾಚಾರಕ್ಕೆ ಕಾರಣವಾಯಿತು.
ಯುವಕನ ಕೈಗೆ ಸುಟ್ಟ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ವಿಚಾರಣೆ ನಡೆಯಲಿದೆ. ಪೆಟ್ರೋಲ್ ಹಾಕಿ ಪಂಚಾಯತ್ ಕಚೇರಿಗೆ ಬೆಂಕಿ ಹಚ್ಚಿದ್ದಾನೆ.