ತಿರುವನಂತಪುರಂ: ಮಾದಕ ದ್ರವ್ಯ ದಂಧೆ ವಿರುದ್ಧದ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿರುವ ಅಬಕಾರಿ ಇಲಾಖೆಯು ನಿಧಿಯ ಕೊರತೆಯಿಂದ ಸಂಕಷ್ಟದಲ್ಲಿದ್ದು, ಬಿಕ್ಕಟ್ಟನ್ನು ಪರಿಹರಿಸಲು ತಕ್ಷಣವೇ ಮಧ್ಯಪ್ರವೇಶಿಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರವನ್ನು ಕಳಿಸಿ ಒತ್ತಾಯಿಸಿದೆ.
ಹೆಚ್ಚುತ್ತಿರುವ ಬಾಕಿಯಿಂದಾಗಿ ಪೆಟ್ರೋಲ್ ಪಂಪ್‍ಗಳು ಅಬಕಾರಿ ವಾಹನಗಳಿಗೆ ಇಂಧನ ತುಂಬಿಸದ ನಿದರ್ಶನಗಳಿವೆ ಮತ್ತು ಅಂತರರಾಜ್ಯ ಸಂಪರ್ಕ ಹೊಂದಿರುವ ಪ್ರಕರಣಗಳ ತನಿಖೆಯ ಜವಾಬ್ದಾರಿಯುತ ಅಧಿಕಾರಿಗಳು ಹಣಕಾಸಿನ ಕೊರತೆಯಿಂದಾಗಿ ರಾಜ್ಯದ ಹೊರಗಿನ ಪ್ರಯಾಣವನ್ನು ಮೊಟಕುಗೊಳಿಸಿವೆ ಎಂದು ಮೂಲಗಳು ತಿಳಿಸಿವೆ.
"ಅಂತರ-ರಾಜ್ಯ ಸಂಪರ್ಕ ಹೊಂದಿರುವ ದೊಡ್ಡ ಪ್ರಕರಣಗಳ ತನಿಖೆಯ ಜವಾಬ್ದಾರಿ ಹೊಂದಿರುವ ಅಬಕಾರಿ ಅಪರಾಧ ವಿಭಾಗದ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತಿದೆ. ಒಂದು ತಂಡವನ್ನು ಹತ್ತಿರದ ರಾಜ್ಯಕ್ಕೆ ಕಳುಹಿಸಬೇಕಾದರೆ, ಕರ್ನಾಟಕಕ್ಕಾದರೆ ಕನಿಷ್ಠ 60,000 ರಿಂದ 75,000 ರೂ.ಬೇಕಾಗುತ್ತದೆ. ಕ್ರೈಂ ಬ್ರಾಂಚ್ ಈಗ ಇಂತಹ ಪ್ರಯಾಣಗಳನ್ನು ಆಯ್ದುಕೊಂಡು ನಡೆಸುತ್ತಿದೆ. ತುರ್ತು ಅಗತ್ಯಗಳಿದ್ದರೆ ಮಾತ್ರ ಪ್ರಯಾಣಕ್ಕೆ ಅನುಮತಿಸಲಾಗುತ್ತದೆ. ತುರ್ತು ಇಲ್ಲದಿದ್ದರೆ, ಬಾಕಿ ಇಡುತ್ತಾರೆ, ”ಎಂದು ಮೂಲಗಳು ತಿಳಿಸಿವೆ.
ಪ್ರಯಾಣಿಸಲು ಅನುಮತಿಸಲಾದ ಹೆಚ್ಚಿನ ಸಂದರ್ಭಗಳಲ್ಲಿ ಸಹ, ತಂಡದ ಸದಸ್ಯರು ವೆಚ್ಚವನ್ನು ಪೂರೈಸಲು ಹಣವನ್ನು ಸಂಗ್ರಹಿಸುತ್ತಾರೆ. ನಂತರ ಅವರು ಮರುಪಾವತಿಗಾಗಿ ಬಿಲ್‍ಗಳನ್ನು ಸಲ್ಲಿಸುತ್ತಾರೆ. ಆದರೆ ಕಳವಳಕಾರಿಯೆಂದರೆ 2021 ರಲ್ಲಿ ಸಲ್ಲಿಸಿದ ಬಿಲ್‍ಗಳು ಇನ್ನೂ ವಿಲೇವಾರಿಗೊಂಡಿಲ್ಲ.
“ಅಬಕಾರಿ ದಳದವರು ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಲು ತಮ್ಮ ಸ್ವಂತ ಜೇಬಿನಿಂದ ಖರ್ಚು ಮಾಡುತ್ತಿದ್ದಾರೆ. ತನಿಖೆ ಕುಂಠಿತವಾಗದಂತೆ ಅವರು ಹಾಗೆ ಮಾಡುವಂತೆ ಒತ್ತಾಯಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಕೆಲವು ಸಂದರ್ಭಗಳಲ್ಲಿ ಇಂಧನ ಬಾಕಿಯು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾಗುತ್ತದೆ ಎಂದು ಅಬಕಾರಿ ಆಯುಕ್ತರ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರ್ಥಿಕ ಅಡಚಣೆ, ಇಲಾಖೆಯು ಕಾರ್ಯಾಚರಣೆಗಳನ್ನು ನಡೆಸುವುದನ್ನು ತಡೆಯುವುದಿಲ್ಲ ಎಂದು ಅಧಿಕಾರಿ ಹೇಳಿದರು. ಈ ವರ್ಷದ ಮೊದಲ ಐದು ತಿಂಗಳಲ್ಲಿ ಅಬಕಾರಿ ಇಲಾಖೆಯು ಸುಮಾರು 46000 ಪ್ರಕರಣಗಳನ್ನು ದಾಖಲಿಸಿದ್ದು, ಅದರಲ್ಲಿ 2700 ಪ್ರಕರಣಗಳು ಮಾದಕ ದ್ರವ್ಯ ದಂಧೆಗೆ ಸಂಬಂಧಿಸಿದೆ.