ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿ ಬುಧವಾರ ವಿಶ್ವ ಯೋಗ ದಿನ ಆಚರಿಸಲಾಯಿತು ಮಾತೃ ಸಂಘದ ಅಧ್ಯಕ್ಷೆ ದಿವ್ಯಾ ಬಿ.ಹಿರಿಯ ಪ್ರಾಥಮಿಕ ವಿಭಾಗದ ಮಕ್ಕಳಿಗೆ ಯೋಗ ತರಬೇತಿ ನೀಡಿ ಮಾತನಾಡಿ, ಯೋಗಾಭ್ಯಾಸ ನಮ್ಮ ಮನಸ್ಸನ್ನು ನಿಯಂತ್ರಿಸುವುದು. ದೈನಂದಿನ ಯೋಗಭ್ಯಾಸದಿಂದ ಮಾನಸಿಕ ಆರೋಗ್ಯದ ಜತೆಗೆ ದೈಹಿಕ ಹಾಗೂ ಬೌದ್ಧಿಕ ವಿಕಾಸ ಸಾಧ್ಯವಾಗುವುದು ಎಂದರು.ಕಿರಿಯ ಪ್ರಾಥಮಿಕ ವಿಭಾಗದ ಮಕ್ಕಳಿಗೆ ಹಿರಿಯ ಶಿಕ್ಷಕ ಸಚ್ಚಿದಾನಂದ ಮೊಗೇರು ಯೋಗ ಪ್ರಾತ್ಯಕ್ಷಿಕೆ ನೀಡಿದರು.