ಕಾಸರಗೋಡು: ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಮತ್ತು ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿಷ್ಠಾನ ಬದಿಯಡ್ಕ ಜಂಟಿ ಆಶ್ರಯದಲ್ಲಿ ಕಯ್ಯಾರ ಕಿಞ್ಞಣ್ಣರೈ ಅವರ 108ನೇ ಹುಟ್ಟುಹಬ್ಬವನ್ನು ಪೆರಡಾಲದ ಇರಾ ಸಾಂಸ್ಕೃತಿಕ ಭವನದಲ್ಲಿ ಆಚರಿಸಲಾಯಿತು. ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಂಗಕಲಾವಿದ ಗಂಗಾಧರ ಆಳ್ವ ದೀಪಪ್ರಜ್ವಲಿಸಿ ಡಾ. ಕಯ್ಯಾರ ಕಿಞಣ್ಣ ರೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಸರ್ಕಾರಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪೆÇ್ರಫೆಸರ್ ಶ್ರೀನಾಥ್ ಅವರು ಕಯ್ಯಾರರ ಕಾಸರಗೋಡಿನ ವಇಲೀನೀಕರಣ ಮತ್ತು ಕನ್ನಡ ಹೋರಾಟ ಬಗ್ಗೆ ಮಾತನಾಡಿದರು
ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಟ್ರಸ್ಟ್ ಅಧ್ಯಕ್ಷ ಚನಿಯಪ್ಪ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ನವಜೀವನ ಶಾಲೆಯ ಅಧ್ಯಾಪಕರಾದ ನಿರಂಜನ ಮಾಸ್ಟರ್, ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ದಿನೇಶ್ ಕೊಕ್ಕಡ ಉಪಸ್ಥಿತರಿದ್ದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿದರು. ಪ್ರಜೀಶ್ ನೆಟ್ಟಣಿಗೆ ವಂದಿಸಿದರು.