ಕಾಸರಗೋಡು: ಜೀವ ವೈವಿಧ್ಯತೆ ಮತ್ತು ಅಂಗಾರಾಮ್ಲದ ಸಮತೋಲನದ ಉದ್ದೇಶದಿಂದ ಕಾಂಡ್ಲಾ ಅರಣ್ಯಪ್ರದೇಶದ ಅಭಿವೃದ್ಧಿ ನಿಟ್ಟಿನಲ್ಲಿ ವಲಿಯಪರಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಡ್ಲಾ ಸಸಿಗಳನ್ನು ನೆಡುವ ಯೋಜನೆಗೆ ವಿಶ್ವ ಪರಿಸರ ದಇನಾಚರಣೆಯಂದು ಚಾಲನೆ ನೀಡಲಯಿತು.
ಪ್ರಸಕ್ತ ವಾರ್ಷಿಕ ಯೋಜನೆಯಲ್ಲಿ ಒಳಗೊಂಡು ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಕಾಂಡ್ಲ ಸಸ್ಯಗಳನ್ನು ಉತ್ತೇಜಿಸುವ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ 'ಮಿಸ್ಟಿ'ಯೋಜನೆಯೊಂದಿಗೆ ಸಂಯೋಜಿಸಿಕೊಂಡು ಕಾಂಡ್ಲಾ ಅಭಿವೃದ್ಧಿ ಯೋಜನೆ ಪ್ರಾರಂಭಿಸಲಾಗಿದೆ. ಸಂಸದ ರಾಜಮೋಹನ್ ಯುನಿಟನ್ ಮ್ಯಾಂಗ್ರೋವ್ ಸಸಿಗಳನ್ನು ನೆಡುವ ಮೂಲಕ ಉದ್ಘಾಟಿಸಿದರು. ಮಿಷ್ಟಿ ಯೋಜನೆಯಡಿ, ಸಾಮಾಜಿಕ ಅರಣ್ಯ ಇಲಾಖೆಯು ಕರಾವಳಿಯ ಪ್ರತಿ ಹೆಕ್ಟೇರ್‍ಗೆ 2500 ಕಾಂಡ್ಲಾ ಸಸಿಗಳನ್ನು ನೆಡಲಾಯಿತು.
ವಲಿಯ ಪರಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ವಿ.ಸಜೀವನ್ ಅಧ್ಯಕ್ಷತೆ ವಹಿಸಿದ್ದರು. ಸಶಖ ಏಮ. ಋಅಝಘೊಫಳರ್ರ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯರ, ರಾಜ್ಯ ಜೀವ ವೈವಿಧ್ಯ ಮಂಡಳಿ ಸದಸ್ಯ ಕೆ.ವಿ.ಗೋವಿಂದನ್, ವಲಿಯ ಪರಂಬ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಿ.ಶ್ಯಾಮಲಾ ಮುಂತಾದವರು ಉಪಸ್ಥಿತರಿದ್ದರು.