ಕಾಸರಗೋಡು: ಜಿಲ್ಲಾ ವೈದ್ಯಾಧಿಕಾರಿ ಕಛೇರಿ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ಸಿದ್ಧಪಡಿಸಿರುವ ಮಾದಕ ವಸ್ತು ವಿರೋಧಿ ಜಾಗೃತಿ ಕಿರುಚಿತ್ರದ ಬಿಡುಗಡೆ ಸಮಾರಂಭ ಚೆರುವತ್ತೂರು ಹೈ ಲೈನ್ ಪ್ಲಾಜಾ ಸಭಾಂಗಣದಲ್ಲಿ ಜರುಗಿತು.
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಕಿರುಚಿತ್ರ'ನೋ'ತಯಾರಿಸಲಾಗಿದೆ.ಮಕ್ಕಳ ನೋಟ, ಚಲನವಲನ ಮತ್ತು ನಡವಳಿಕೆಯಲ್ಲಿನ ಬದಲಾವಣೆಗಳನ್ನು ಗುರುತಿಸಲು ಅಥವಾ ಮಕ್ಕಳ ನಡವಳಿಕೆ ಸರಿಪಡಿಸಿಕೊಳ್ಳಲಾಗದೆ ಕೈಚೆಲ್ಲುತ್ತಿರುವ ಪೆÇೀಷಕರನ್ನು ಕೇಂದ್ರೀಕರಿಸಿ ಚಿತ್ರ ತಯಾರಿಸಲಾಗಿದೆ. ಆರೋಗ್ಯ ಇಲಾಖೆಯ ವೈದ್ಯರು ಸೇರಿದಂತೆ ಇತರ ಸಿಬ್ಬಂದಿ ಮುಖ್ಯವಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಜಿಲ್ಲಾ ವೈದ್ಯಕೀಯ ಕಛೇರಿಯ ಜೂನಿಯರ್ ಹೆಲ್ತ್ ಇನ್ಸ್‍ಪೆಕ್ಟರ್ ಪಿ.ವಿ ಮಹೇಶ್ ಕುಮಾರ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನ ಶ್ರೀಜಿತ್ ಕರಿವೆಲ್ಲೂರ್, ಹಿನ್ನೆಲೆ ಸಂಗೀತ ಜಯನ್ ಪಿ.ಪಿ ಒದಗಿಸಿದ್ದಾರೆ.
'ಮೋ'ಕುಡಿತದ ಚಟಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುವವರ ಕಥೆಯನ್ನು ಚಿತ್ರದಲ್ಲಿ ಅಳವಡಿಸಲಾಗಿದೆ. ನೀಲೇಶ್ವರಂ ಬ್ಲಾಕ್ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ ಕಿರುಚಿತ್ರ ಬಿಡುಗಡೆ ಮಾಡಿದರು. ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಅಧ್ಯಕ್ಷತೆ ವಹಿಸಿದ್ದರು. ಚೆರುವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ವಿ.ಪ್ರಮೀಳಾ ಮುಖ್ಯ ಅತಿಥಿಯಾಗಿದ್ದರು. ಡಾ.ಕೆ.ವಿ.ಪ್ರಕಾಶ್, ಡಾ.ಡಿ.ಜಿ.ರಮೇಶ್, ಡಾ. ಟಿ.ವಿ.ಸುರೇಂದ್ರನ್, ಡಾ.ಪ್ರಸಾದ್ ಥಾಮಸ್, ಡಾ.ನಿಯಾಎಂ.ವೇಣುಗೋಪಾಲನ್, ಕೆ.ರಾಜೀವನ್ ಉಪಸ್ಥಿತರಿದ್ದರು. ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿದರು. ಎಸ್.ಸಯನಾ ವಂದಿಸಿದರು.