HEALTH TIPS

ಪತ್ರಕರ್ತರ ಪಿಂಚಣಿ ಸಕಾಲಕ್ಕೆ ವಿತರಿಸಲು ಹಿರಿಯ ಪತ್ರಕರ್ತರ ವೇದಿಕೆ ಆಗ್ರಹ

   

 


            ಕಾಸರಗೋಡು: ಪತ್ರಕರ್ತರ ಪಿಂಚಣಿ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಪತ್ರಕರ್ತರ ವೇದಿಕೆ ಕೇರಳದ ಕಾಸರಗೋಡು  ಜಿಲ್ಲಾ ಸಮ್ಮೇಳನ ಒತ್ತಾಯಿಸಿದೆ. 

         ಪಿಂಚಣಿಗಾಗಿ ಸಲ್ಲಿಕೆಯಾಗಿ ಪರಿಗಣನೆಗಾಗಿ ಬಾಕಿ ಇರುವ ಅರ್ಜಿಗಳನ್ನು ತಕ್ಷಣ ಇತ್ಯರ್ಥಪಡಿಸಬೇಕು, ಇದಕ್ಕಾಗಿ ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು, ಪ್ರತಿ ತಿಂಗಳ ಮೊದಲ ವಾರದಲ್ಲಿ ಪಿಂಚಣಿ ವಿತರಿಸಬೇಕು ಎಂದು ಸಮ್ಮೇಳನ ಒತ್ತಾಯಿಸಿದೆ.

ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ವಿಜಯಕುಮಾರ್ ಸಮ್ಮೇಳನ ಉದ್ಘಾಟಿಸಿ ಮತನಾಡಿ, ಮಾಧ್ಯಮ ರಂಗ ಮತ್ತು ಮಾಧ್ಯಮ ಕಾರ್ಯಕರ್ತರು ಹೆಚ್ಚಿನ ಸಂಕಷ್ಟ ಎದುರಿಸುತ್ತಿದ್ದು, ಈ ಕಾಲಘಟ್ಟದಲ್ಲಿ ಪಿಂಚಣಿ ಸೇರಿದಂತೆ ಸವಲತ್ತು ಶೀಘ್ರ ತಲುಪಿಸಿಕೊಡಲು ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು. 

           ಸಂಘಟನೆ ಜಿಲ್ಲಾಧ್ಯಕ್ಷ ವಿ.ವಿ.ಪ್ರಭಾಕರನ್, ರಾಜ್ಯ ಪಿಂಚಣಿ ಸಮಿತಿ ಸದಸ್ಯ ರಹಮಾನ್ ತಾಯಲಂಗಡಿ, ಖಾಲಿದ್ ಪೆÇವ್ವಲ್, ಕೆ.ಮೋಹನನ್, ಪಿ.ಪಿ.ಕರುಣಾಕರನ್, ನಾರಾಯಣನ್ ಕುಟ್ಟಿ ಸಿ.ಎಸ್., ಪಿ.ಚಂದ್ರಮೋಹನ್ ಮತ್ತು ಕೆ.ಅಶೋಕನ್ ಉಪಸ್ಥಿತರಿದ್ದರು.  ಸಮ್ಮೇಳನದಲ್ಲಿ ಪ್ರಶಸ್ತಿ ವಿಜೇತರಾದ ಖಾಲಿದ್ ಪೆÇವ್ವಾಲ್ ಮತ್ತು ಎನ್ ಗಂಗಾಧರನ್ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಸನ್ಮಾನಿಸಿದರು. ಜಿಲ್ಲಾ ಕಾರ್ಯದರ್ಶಿ ಸನ್ನಿ ಜೋಸೆಫ್ ಸ್ವಾಗತಿಸಿದರು.  ಕೋಶಾಧಿಕಾರಿ ಎನ್.ಗಂಗಾಧರನ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries