ಕಾಸರಗೋಡು: ಜಿಲ್ಲೆಯ ವಿವಿಧ ನಿರ್ಮಿತಿ ಕೇಂದ್ರಗಳಲ್ಲಿ ಉರಾಳುಂಗಲ್ ಕಾರ್ಮಿಕ ಗುತ್ತಿಗೆ ಸಹಕಾರ ಸಂಘದ ಆಶ್ರಯದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿಶ್ವ ಪರಿಸರ ದಿನದ "ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ" ಘೋಷಣೆಯನ್ವಯ ಕಾರ್ಯಕ್ರಮ ಆಯೋಜಿಸಲಗಿತ್ತು.
ಕುಂಬಳೆ ಸನಿಹ ರಾಷ್ಟ್ರೀಯ ಹೆದ್ದಾರಿ ಅಂಚಿಗೆ ಹಣ್ಣಿನ ಸಸಿಗಳ ಉದ್ಯಾನಕ್ಕೆ ಚಲನಚಿತ್ರ ನಟ ಪಿ. ಪಿ. ಕುಞÂಕೃಷ್ಣನ್ ಸಸಿ ನೆಡುವ ಮೂಲಕ ಚಲನೆ ನೀಡಿದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾ ಭೂವಿಜ್ಞಾನಿ ಕೆ. ಆರ್. ಜಗದೀಶನ್ ಮತ್ತು ಕವಿ ಪವಿತ್ರನ್ ತೀಕುಣಿ ವಿಶೇಷ ಅತಿಥಿಗಳಾಗಿದ್ದರು. ಕಾಸರಗೋಡು ಮೆಡಿಕಲ್ ಕಾಲೇಜು ಮೈದಾನದಲ್ಲಿ ಸಸಿಗಳನ್ನು ನೆಡಲಾಯಿತು. ಕಾಸರಗೋಡು ವೈದ್ಯಕೀಯ ಕಾಲೇಜು ಅಧೀಕ್ಷಕ ಪ್ರವೀಣ್ ಅವರು ಕಾರ್ಮಿಕರ ಸಮ್ಮುಖದಲ್ಲಿ ಸಸಿ ನೆಡುವ ಮೂಲಕ ಸಮಾರಂಭ ಉದ್ಘಾಟಿಸಿದರು. ಸೈಟ್ ಲೀಡರ್ ರಾಗೀಶ್, ಪ್ರಾಜೆಕ್ಟ್ ಮ್ಯಾನೇಜರ್ ಅಭಿಲಾಶ್, ಕಿಟ್ಕೋ ಸೈಟ್ ಮ್ಯಾನೇಜರ್ ನಿಧಿನ್, ಹಿರಿಯ ಸೈಟ್ ವರ್ಕರ್ಸ್ ಪ್ರಕಾಶನ್, ಸಂಪೂರ್ಣ ಸುರಕ್ಷತಾ ಅಧಿಕಾರಿಗಳು ಮತ್ತು ಎಂಜಿನಿಯರ್‍ಗಳು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.