HEALTH TIPS

ಜನಸಂದಣಿ, ಪ್ರಯಾಣ ಮಾಹಿತಿಗಾಗಿ BLR Pulse ಆ್ಯಪ್ ಅಭಿವೃದ್ಧಿಪಡಿಸಿದ ಬೆಂಗಳೂರು ವಿಮಾನ ನಿಲ್ದಾಣ

            ಬೆಂಗಳೂರು: ಪ್ರಯಾಣಿಕರಿಗೆ ನೆರವಾಗುವ ನಿಟ್ಟಿನಲ್ಲಿ ‘ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ ಪಲ್ಸ್’ ಅಥವಾ ‘ಬಿಎಲ್‌ಆರ್ ಪಲ್ಸ್ (BLR Pulse)’ ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಅನಾವರಣಗೊಳಿಸಿದೆ.


                 ಈ ಆ್ಯಪ್ ಭದ್ರತಾ ತಪಾಸಣೆಗೆ ದೀರ್ಘ ಸರತಿ ಸಾಲುಗಳು, ಕಾಯುವ ಸಮಯ ಇತ್ಯಾದಿ ಸಾಮಾನ್ಯ ಪ್ರಯಾಣದ ಪೂರ್ವ ಆತಂಕಗಳನ್ನು ನಿವಾರಿಸಲಿದ್ದು, ಪ್ರಯಾಣಿಕರಿಗೆ ನಿರ್ಗಮನ ಮತ್ತು ಆಗಮನದ ಸಮಯದಲ್ಲಿ ಟರ್ಮಿನಲ್​ಗಳೊಂದಿಗೆ ರಿಯಲ್ ಟೈಮ್ ನ್ಯಾವಿಗೇಷನ್ ಅನ್ನು ಒದಗಿಸುವ ಮೂಲಕ ಪ್ರಯಾಣಿಕರ ಅಗತ್ಯವನ್ನು ಪೂರೈಸಲಿದೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

               ಈ ವಿಶೇಷ ಆ್ಯಪ್​​ನಲ್ಲಿ ಪ್ರಯಾಣಿಕರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಲು ಚಾಟ್‌ಬಾಟ್ ಸೌಲಭ್ಯ ಕೂಡ ಇದೆ. ಈ ಸೇವೆ ಮುಂದಿನ ಕೆಲವೇ ದಿನಗಳಲ್ಲಿ ಇನ್ನಷ್ಟು ಸುಧಾರಣೆಯಾಗಲಿದ್ದು, ಪ್ರಯಾಣಿಕರಿಗೆ ಉತ್ತಮ ಅನುಭವ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.

              ವಿಮಾನ ನಿಲಗ್ದಾಣದ ಪ್ರಕಟಣೆ ಪ್ರಕಾರ, ಈ ಆ್ಯಪ್ ವಿಮಾನದ ರಿಯಲ್​ಟೈಮ್ ಮಾಹಿತಿ, ಪ್ರವೇಶ ಗೇಟ್‌ಗಳು, ಚೆಕ್-ಇನ್ ಕೌಂಟರ್‌ಗಳು ಮತ್ತು ಭದ್ರತಾ ತಪಾಸಣೆ ಪ್ರದೇಶಗಳು ಸೇರಿದಂತೆ ಪ್ರಯಾಣಿಕರಿಗೆ ಸಂಬಂಧಿಸಿದ ವಿವಿಧ ಮಾಹಿತಿಗಳನ್ನು ಪ್ರಯಾಣಿಕರ ಮೊಬೈಲ್ ಅಥವಾ ಇಮೇಲ್ ಇನ್‌ಬಾಕ್ಸ್‌ಗಳಿಗೆ ನೇರವಾಗಿ ಸಂದೇಶ ಕಳುಹಿಸುವ ಮೂಲಕ ಒದಗಿಸಲಿದೆ. ಆ್ಯಪ್​​ನಲ್ಲಿರುವ ‘ವೇಫೈಂಡರ್’ ವೈಶಿಷ್ಟ್ಯವು ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ಪ್ರವೇಶವನ್ನು ಸುಲಭವಾಗಿಸಲಿದೆ. ಪ್ರಯಾಣಿಕರು ತಮ್ಮ ಅಲ್ಪಾವಧಿಯ ತಂಗುವಿಕೆಗಾಗಿ ಆ್ಯಪ್ ಮೂಲಕ ಹೋಟೆಲ್ ಅನ್ನು ಬುಕ್ ಮಾಡಬಹುದು ಅಥವಾ ಅವರ ಕೊನೆಯ ನಿಮಿಷದ ಫ್ಲೈಟ್ ಚೆಕ್-ಇನ್‌ಗಳನ್ನು ಪೂರ್ಣಗೊಳಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

                ಆ್ಯಪ್ ಅನ್ನು ಆಂಡ್ರಾಯ್ಡ್‌ಗಾಗಿ ಪ್ಲೇ ಸ್ಟೋರ್ ಮತ್ತು ಆಪಲ್‌ಗಾಗಿ ಆಪ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ.

 

ಆ್ಯಪ್ ಪ್ರಯೋಜನಗಳೇನು?
1. ವಿಮಾನಗಳ ಸಮಯ, ರಿಯಲ್​ಟೈಮ್ ನೊಟಿಫಿಕೇಶನ್​ಗಳನ್ನು ನೀಡಲಿದೆ.
2. ವಿವಿಧ ಟಚ್‌ಪಾಯಿಂಟ್‌ಗಳಲ್ಲಿ ಭದ್ರತಾ ತಪಾಸಣೆಯ ಸರತಿ ಸಾಲುಗಳ ರಿಯಲ್​​ಟೈಮ್ ಅಪ್​ಟೇಟ್ ದೊರೆಯಲಿದೆ
3. ರೆಸ್ಟೋರೆಂಟ್‌ಗಳಲ್ಲಿ ಟೇಬಲ್ ಕಾಯ್ದಿರಿಸಲು, ಆಹಾರವನ್ನು ಆರ್ಡರ್ ಮಾಡಲು ಹಾಗೂ ಅದನ್ನು ನಿಲ್ದಾಣದ ಗೇಟ್‌ಗೆ ತಲುಪಿಸಲು ನೆರವಾಗಲಿದೆ
4. ಕಳೆದುಹೋದ ವಸ್ತುಗಳನ್ನು ಗುರುತಿಸಲು ಮತ್ತು ಪಡೆಯಲೂ ನೆರವಾಗಲಿದೆ
5. ಪ್ರಯಾಣದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಲು ಚಾಟ್‌ಬಾಟ್
6. ಕೊನೆಯ ನಿಮಿಷದ ಚೆಕ್-ಇನ್​ಗಳ ಮಾಹಿತಿ
7. ಸಾರಿಗೆ ಸೇವೆ ಅಥವಾ ಪಾರ್ಕಿಂಗ್ ವಿವರಗಳನ್ನು ಪರಿಶೀಲಿಸಲು ನೆರವಾಗಲಿದೆ
8. ರಿಟೇಲ್ ಅಂಗಡಿಗಳು ಮತ್ತು ಎಫ್​&ಬಿ ಔಟ್‌ಲೆಟ್‌ಗಳ ರಿಯಾಯಿತಿ ಕೊಡುಗೆಗಳ ಪ್ರಯೋಜನ ಪಡೆಯಲು ನೆರವಾಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries