ಕಾಸರಗೋಡು: ವರ್ಕಾಡಿ ಪಾವೂರು ಪೊಯ್ಯೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆಡಳಿತ ಸಮಿತಿಯ ಮಹಾಸಭೆ ಸಮಿತಿ ಅಧ್ಯಕ್ಷ ಶಿವರಾಮ ಶೆಟ್ಟಿ, ಮುಗೇರು ಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕ್ಷೇತ್ರ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರು, ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಸಮಿತಿ ಕೋಶಾಧಿಕಾರಿ ಭುಜಂಗ ಸಿಂತಾಜೆ ವರದಿ, ಪ್ರಧಾನ ಕಾರ್ಯದರ್ಶಿ ರವಿಮುಡಿಮಾರು ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಉದಯಕುಮಾರ್ ಬೊಳಕಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸುಧಾಕರ ಶೆಟ್ಟಿ ಪಾವೂರು ಆಯ್ಕೆಯಾದರು. ನಾಗೇಶ್ ಮುಚ್ಚಿಲ್ಮೆ ಕೋಶಾಧಿಕಾರಿ, ಟಿ. ನಾರಾಯಣಶೆಟ್ಟಿ ತೋಟ ಮತ್ತು ಚಂದ್ರಹಾಸ ಪೂಜಾರಿ ಮುಡಿಮಾರು ಉಪಧ್ಯಕ್ಷರು, ಬಿ ತ್ಯಾಂಪಣ್ಣ ರೈ ಮತ್ತು ಭುಜಂಗ ಸಿಂತಾಜೆ ಲೆಕ್ಕ ಪರಿಶೋಧಕರು, ವಿನೋದ್ ಕುಮಾರ್ ರಂಜೆಪಡುಪು, ಗೋಪಾಲ ಅಂಚನ್ ನೆಕ್ಕಲ ಜೊತೆ ಕಾರ್ಯದರ್ಶಿಗಳು, ಮುಗೇರು ಗುತ್ತು ಶಿವರಾಮಶೆಟ್ಟಿ, ನಾರಾಯಣಶೆಟ್ಟಿ ಬಜಾಲ್, ಜಯಪ್ರಕಾಶ್ ಅಡ್ಯಂತಾಯ ಕಾಪು ,ವಸಂತ ರೆಂಜಪಡುಪು, ಶೇಖರ ಕಾನದ ಕಟ್ಟ, ಭೋಜಮಾಸ್ಟರ್ ಬಲ್ಲೂರು, ಬೂಬ ಡಿ ಪೆÇಯ್ಯೆ, Àವಿ ಮುಡಿಮಾರ್ ,ರಾಜಕುಮಾರ್ ಶೆಟ್ಟಿ ಮುಟ್ಟ, ನಾಗೇಶ್ ಬಲ್ಲೂರು ,ದಯಾನಂದ ಪೂಜಾರಿ ನೆಕ್ಕಲ ,ಮಾಧವ ಪೂಜಾರಿ ಕುದುಕೋರಿ, ಮೋಹನ ಪುಲಿತಡಿ, ಪದ್ಮನಾಭ ಕಲ್ಲಾಪು, ಸದಾಶಿವ ಪೂಜಾರಿ ಮುಟ್ಟ, ಮೋನಪ್ಪ ಶೆಟ್ಟಿ ಮುಟ್ಟ, ಭಾಸ್ಕರ್ ಶೆಟ್ಟಿ ಕೆದುಂಬಾಡಿ,ಪುನೀತ್ ರೈ ಉದ್ದ, ರಾಜೇಶ್ ಕಾನದಕಟ್ಟ ,ಉಮೇಶ್ ಕೊಪ್ಪಳ, ನವಿರಾಜ್ ಮುಡಿಮಾರ್ ಸಮಿತಿ ಸದಸ್ಯರಾಗಿ ಆಯ್ಕೆಯಾದರು. ರವಿ ಮುಡಿಮಾರು ಸ್ವಾಗತಿಸಿದರು. ಸುಧಾಕರ್ ಶೆಟ್ಟಿ ಪಾವೂರು ವಂದಿಸಿದರು.