ಕಾಸರಗೋಡು: ನಕಲಿ ಕೆಲಸದ ಅನುಭವ ದಾಖಲೆ ಬಳಸಿ ಕರಿಂದಳ ಕಾಲೇಜಿನಲ್ಲಿ ಉದ್ಯೋಗ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ವಿಚಾರಣೆಗೆ ಹಾಜರಾಗುವಂತೆ ನೀಲೇಶ್ವರ ಪೋಲೀಸರು ವಿದ್ಯಾಗೆ ನೋಟಿಸ್ ಜಾರಿ ಮಾಡಿದ್ದಾರೆ. ಕರಿಂದಳ ಕಾಲೇಜಿನ ಪ್ರಾಂಶುಪಾಲರು ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ನಕಲಿ ಕೆಲಸದ ಅನುಭವ ಪ್ರಕರಣದಲ್ಲಿ ಅಗಳಿ ಪೋಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ವಿದ್ಯಾಗೆ ಶನಿವಾರ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ನ್ಯಾಯಾಲಯ ಇಬ್ಬರನ್ನು ತಲಾ 50,000 ರೂಪಾಯಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಜಾಮೀನು ಕೇರಳವನ್ನು ತೊರೆಯದಂತೆ, ಪಾಸ್‍ಪೋರ್ಟ್ ಸಲ್ಲಿಸಲು ಮತ್ತು ಅಪರಾಧವನ್ನು ಪುನರಾವರ್ತಿಸದಂತೆ ಕಠಿಣ ಷರತ್ತುಗಳನ್ನು ನೀಡಿದೆ.
ಎರಡು ವಾರಗಳ ನಂತರ ತನಿಖಾಧಿಕಾರಿ ಮುಂದೆ ಹಾಜರಾಗುವಂತೆಯೂ ನ್ಯಾಯಾಲಯ ಸೂಚಿಸಿದೆ. ಎರಡನೇ ಪ್ರಕರಣದಲ್ಲಿ ವಿದ್ಯಾಳನ್ನು ನೀಲೇಶ್ವರ ಪೋಲೀಸರು ಕಸ್ಟಡಿಗೆ ತೆಗೆದುಕೊಳ್ಳಬಹುದೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದರ ಆಧಾರದ ಮೇಲೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ವಿದ್ಯಾ ಮಹಾರಾಜ ಕಾಲೇಜಲ್ಲಿ ಎರಡು ವರ್ಷ ಕಲಿಸಿದ ನಕಲಿ ಸರ್ಟಿಫಿಕೇಟ್ ಸಲ್ಲಿಸಿದ್ದಳು. ಜೂನ್ 2022 ರಿಂದ ಮಾರ್ಚ್ 2023 ರವರೆಗೆ, ವಿದ್ಯಾ ಅವರು ಕರಿಂದಳ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಳು.
ಕರಿಂದಳ ಕಾಲೇಜಿನಲ್ಲಿ ಸಲ್ಲಿಸಿದ ನಕಲಿ ಪ್ರಮಾಣಪತ್ರವನ್ನೇ ಅಟ್ಟಪಾಡಿಯಲ್ಲಿಯೂ ನೀಡಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದು, ಸಿಕ್ಕಿಬೀಳುವುದು ಖಚಿತವಾದಾಗ ದಾಖಲೆಗಳನ್ನು ನಾಶಪಡಿಸಲಾಗಿದೆ ಎಂದು ಪೋಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.