ಕೊಚ್ಚಿ: ದೇಶಿಯವಾಗಿ ನಿರ್ಮಿಸಲಾಗಿರುವ ಭಾರತದ ಮೊದಲ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಯೋಗಾಭ್ಯಾಸ ಮಾಡಿದರು.
ಕೊಚ್ಚಿ: ದೇಶಿಯವಾಗಿ ನಿರ್ಮಿಸಲಾಗಿರುವ ಭಾರತದ ಮೊದಲ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಯೋಗಾಭ್ಯಾಸ ಮಾಡಿದರು.
ನೌಕಾಪಡೆಯ ನೂರಾರು ಸಿಬ್ಬಂದಿಗಳು ಜತೆ ಅವರು ವಿವಿಧ ಆಸನಗಳನ್ನು ಮಾಡಿದರು.
ನೌಕಾಪಡೆಯ ವಿವಿಧ ರ‍್ಯಾಂಕ್‌ಗಳ ಸಿಬ್ಬಂದಿಗಳು ಯೋಗದಿನದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸುಮಾರು ಒಂದು ಗಂಟೆಗಳ ಕಾಲ ಯೋಗಾಭ್ಯಾಸ ನಡೆಯಿತು.
ಅಗ್ನಿವೀರ ಯೋಧರು ಸಾಮೂಹಿಕವಾಗಿ ಯೋಗ ಪ್ರದರ್ಶನ ನೀಡಿದರು.
ನೌಕಾಪಡೆ ಮುಖ್ಯಸ್ಥ ಆರ್. ಹರಿ ಕುಮಾರ್, ನೌಕಾಪಡೆಯ ಹಿರಿಯ ಸಿಬ್ಬಂದಿಗಳು, ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.