ನವದೆಹಲಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯದ ಎಲ್ಲಾ ಮನೆಗಳಿಗೆ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಉದ್ದೇಶಿಸಿರುವ ಮಹತ್ವಾಕಾಂಕ್ಷೆಯ ಕೇರಳ ಫೈಬರ್ ಆಪ್ಟಿಕಲ್ ನೆಟ್ ವರ್ಕ್ (K-FON) ಅನ್ನು ಸೋಮವಾರ ಪ್ರಾರಂಭಿಸಲಾಯಿತು.
ನವದೆಹಲಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯದ ಎಲ್ಲಾ ಮನೆಗಳಿಗೆ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಉದ್ದೇಶಿಸಿರುವ ಮಹತ್ವಾಕಾಂಕ್ಷೆಯ ಕೇರಳ ಫೈಬರ್ ಆಪ್ಟಿಕಲ್ ನೆಟ್ ವರ್ಕ್ (K-FON) ಅನ್ನು ಸೋಮವಾರ ಪ್ರಾರಂಭಿಸಲಾಯಿತು.
ಯೋಜನೆಯನ್ನು ರಾಜ್ಯಕ್ಕೆ ಸಮರ್ಪಿಸಿದ ಸಿಎಂ ಪಿಣರಾಯಿ ವಿಜಯನ್, ಇಂಟರ್ನೆಟ್ ಪಡೆಯುವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಿದ ದೇಶದ ಏಕೈಕ ರಾಜ್ಯ ಕೇರಳ ಎಂದು ಹೇಳಿದರು. 'ಅಂತರ್ಜಾಲವು ಮೂಲಭೂತ ಹಕ್ಕಾಗಿ ಕಾಗದದಲ್ಲಿ ಉಳಿಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ರಾಜ್ಯವು K-FON ಅನ್ನು ಜಾರಿಗೆ ತರುತ್ತಿದೆ. ಎಲ್ಲರಿಗೆ ಹೈಸ್ಪೀಡ್ ಇಂಟರ್ನೆಟ್ ತಲುಲಪಿಸಲು ರಾಜ್ಯವು ಈಗ ಮೂಲಭೂತ ಮೂಲಸೌಕರ್ಯಗಳನ್ನು ಒದಗಿಸುತ್ತಿದೆ' ಎಂದು ಅವರು ಹೇಳಿದರು.
ವರ್ಕ್ ಫ್ರಂ ಹೋಮ್ ಗೂ ಸಹಕಾರಿ ಈ ಹೊಸ ಯೋಜನೆ!
ಯೋಜನೆಯ ಭಾಗವಾಗಿ, 17,412 ಸರ್ಕಾರಿ ಕಚೇರಿಗಳು ಮತ್ತು 2,105 ಮನೆಗಳಿಗೆ K-FON ಸಂಪರ್ಕವನ್ನು ನೀಡಲಾಗಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು. 9,000 ಮನೆಗಳಿಗೆ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ಕೇಬಲ್ ಜಾಲವನ್ನು ಸ್ಥಾಪಿಸಲಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ವರ್ಕ್ ಫ್ರಂ ಹೋಮ್ ಹೊಸ ಕೆಲಸದ ಸಂಸ್ಕೃತಿಯಾಗಿ ಹೊರಹೊಮ್ಮಿದೆ' ಎಂದು ಅವರು ಹೇಳಿದರು. K-FON ಮೂಲಕ ಹೊಸ ಪದ್ಧತಿ ಇನ್ನಷ್ಟು ವ್ಯಾಪಕವಾಗಿ ಬೆಳೆಯಲಿದೆ ಎನ್ನಲಾಗಿದೆ.
K-FON ಬಿಪಿಎಲ್ ಕಾರ್ಡುದಾರರಿಗೆ ಉಚಿತ!
' ನಮ್ಮ ಯುವಕರು ಈ ಉದಯೋನ್ಮುಖ ಕೆಲಸದ ಶೈಲಿಗಳಿಂದ ಪ್ರಯೋಜನ ಪಡೆಯಬೇಕಾದರೆ, ರಾಜ್ಯದಾದ್ಯಂತ ಉತ್ತಮ ಇಂಟರ್ನೆಟ್ ಸಂಪರ್ಕ ಇರಬೇಕು. K-FON ಆ ಸೌಲಭ್ಯ ಎಲ್ಲರಿಗೂ ತಲುಪಿಸಲು ಉದ್ದೇಶಿಸಿದೆ' ಎಂದು ಅವರು ಹೇಳಿದರು. K-FON ಮೂಲಕ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳು ಉಚಿತವಾಗಿ ಇಂಟರ್ನೆಟ್ ಪ್ರವೇಶಿಸಲು ಸಾಧ್ಯವಾಗುತ್ತದೆ. ಈ ಮೂಲಕ ಅತ್ಯಂತ ಹಿಂದುಳಿದವರೂ ಹೊಸ ಪ್ರಪಂಚಕ್ಕೆ ತೆರೆದುಕೊಂಡು ಹೊಂದಿಕೊಳ್ಳಲು ಸಾಧ್ಯವಾಗಲಿದೆ.