HEALTH TIPS

ಯೋಗಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿದ್ದು ಪ್ರಧಾನಿ ಮೋದಿ ನೇತೃತ್ವದ NDA ಸರ್ಕಾರ: ಶಶಿ ತರೂರ್

 ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಇದೀಗ ಹಲವು ರಾಜಕೀಯ ಮಜಲುಗಳನ್ನು ತೆಗೆದುಕೊಳ್ಳುತ್ತಿದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಮುಂಜಾನೆ ಶಿರ್ಷಾಸನ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದ ಕಾಂಗ್ರೆಸ್, ಯೋಗವನ್ನು ಜನಪ್ರಿಯಗೊಳಿಸಿದ ಮತ್ತು ರಾಷ್ಟ್ರೀಯ ನೀತಿಯ ಭಾಗವಾಗಿಸಿದ ಪಂಡಿತ್ ನೆಹರೂ ಅವರಿಗೆ ಧನ್ಯವಾದಗಳು' ಎಂದು ಶೀರ್ಷಿಕೆ ಕೊಟ್ಟಿದೆ. 


ಆದರೆ ಇದಕ್ಕೆ ವ್ಯತಿರಿಕ್ತವಾಗಿ ಹಿರಿಯ ಕಾಂಗ್ರೆಸ್ ನಾಯಕ ಶಶಿತರೂರ್ ಟ್ವೀಟ್ ಮಾಡಿದ್ದು ನಮ್ಮ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ವಿದೇಶಾಂಗ ಸಚಿವಾಲಯ ಸೇರಿದಂತೆ ಯೋಗವನ್ನು ಪುನರುಜ್ಜೀವನಗೊಳಿಸಿ ಜನಪ್ರಿಯಗೊಳಿಸಿದವರಿಗೂ ನಾವು ಧನ್ಯವಾದ ಹೇಳಬೇಕು. ಎನ್ ಡಿಎ ಸರ್ಕಾರ ವಿಶ್ವಸಂಸ್ಥೆಯ ಮೂಲಕ ಯೋಗ ದಿನವನ್ನು ಅಂತಾರಾಷ್ಟ್ರೀಯಗೊಳಿಸಿದೆ. ನಾನು ದಶಕಗಳಿಂದ ಹೇಳುತ್ತಾ ಬಂದಿದ್ದೇನೆ, ಯೋಗವು ನಮ್ಮ ಮೃದು ಶಕ್ತಿಯ ಪ್ರಮುಖ ಭಾಗವಾಗಿದೆ. ಅದನ್ನು ಗುರುತಿಸುವುದು ಒಳ್ಳೆಯದು ಎಂದು ಅವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries