HEALTH TIPS

ಶಾಂತಿ ಸೂತ್ರಕ್ಕೆ ಭಾರತದ ಬೆಂಬಲಕ್ಕಾಗಿ NSA ಅಜಿತ್ ದೋವಲ್ ಜೊತೆ ಉಕ್ರೇನ್ ಅಧ್ಯಕ್ಷರ ಉನ್ನತ ಸಹಾಯಕನ ಚರ್ಚೆ!

                ನವದೆಹಲಿ: ರಷ್ಯಾ ತನ್ನ ಆಕ್ರಮಣವನ್ನು ಮುಂದುವರೆಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್‌ಗೆ ಉಕ್ರೇನ್ ಅಧ್ಯಕ್ಷರ ಮುಖ್ಯಸ್ಥ ಆಂಡ್ರಿ ಯೆರ್ಮಾಕ್ ಅವರು ತಮ್ಮ ದೇಶದ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದ್ದು  ಉಕ್ರೇನ್ ಶಾಂತಿ ಸೂತ್ರಕ್ಕೆ ಭಾರತದ ಬೆಂಬಲವನ್ನು ಕೋರಿದ್ದಾರೆ.

                 ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಕಚೇರಿಯ ಮುಖ್ಯಸ್ಥ ಯೆರ್ಮಾಕ್ ಅವರು ಬುಧವಾರ ಅಜಿತ್ ದೋವಲ್ ಅವರಿಗೆ ಕರೆ ಮಾಡಿದ್ದು ಉಕ್ರೇನ್ ನಲ್ಲಿ ಶಾಂತಿ ಸ್ಥಾಪನೆಗೆ ಜಾಗತಿಕ ಬೆಂಬಲವನ್ನು ಬಲಪಡಿಸುವ ಜೊತೆಗೆ 'ಜಾಗತಿಕ ಶಾಂತಿ ಶೃಂಗಸಭೆ'ಯ ಸಿದ್ಧತೆಗಳನ್ನು ಚರ್ಚಿಸಿದ್ದಾರೆ ಎಂದು ಹೇಳಿದರು.

               ಹಿರೋಷಿಮಾದಲ್ಲಿ ನಡೆದಿದ್ದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಝೆಲೆನ್ಸ್ಕಿ ಮಾತುಕತೆ ನಡೆಸಿದ ಮೂರು ವಾರಗಳ ನಂತರ ಈ ದೂರವಾಣಿ ಸಂಭಾಷಣೆ ನಡೆದಿದೆ. ಉಕ್ರೇನ್ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಭಾರತ ಸಾಧ್ಯವಿರುವ ಎಲ್ಲವನ್ನೂ ಮಾಡಲಿದೆ ಎಂದು ಮೋದಿ ಉಕ್ರೇನ್ ಅಧ್ಯಕ್ಷರಿಗೆ ಸಭೆಯಲ್ಲಿ ತಿಳಿಸಿದ್ದರು.

               ಈ ಸಂದರ್ಭದಲ್ಲಿ ಉಭಯ ದೇಶಗಳು ಜಾಗತಿಕ ಶಾಂತಿ ಶೃಂಗಸಭೆಯ ಸಿದ್ಧತೆಗಳನ್ನು ಚರ್ಚಿಸಿದವು. ಆಂಡ್ರಿ ಯೆರ್ಮಾಕ್ ಅವರು ಜಾಗತಿಕ ದಕ್ಷಿಣ ಸೇರಿದಂತೆ ವ್ಯಾಪಕ ಶ್ರೇಣಿಯ ದೇಶಗಳನ್ನು ಒಳಗೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

                ಉಕ್ರೇನ್ ಶಾಂತಿ ಸೂತ್ರವು ಉಕ್ರೇನ್ ಮತ್ತು ಇಡೀ ಜಗತ್ತಿಗೆ ಎಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ ಎಂದು ಇತ್ತೀಚಿನ ಘಟನೆಗಳು ಮತ್ತೊಮ್ಮೆ ಸಾಬೀತುಪಡಿಸಿವೆ. ಶಾಂತಿ ಸೂತ್ರವನ್ನು ಕಾರ್ಯಗತಗೊಳಿಸಲು ಜಾಗತಿಕ ಶೃಂಗಸಭೆಯನ್ನು ನಿರ್ವಹಿಸಲು ನಾವು ಪಾಲುದಾರರೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ. ಭಾರತವು ಅದರಲ್ಲಿ ಭಾಗವಹಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಅಧ್ಯಕ್ಷೀಯ ಕಚೇರಿಯ ಮುಖ್ಯಸ್ಥರು ತಿಳಿಸಿದ್ದಾರೆ.

                  ಉಕ್ರೇನ್ ನಗರಗಳು ಮತ್ತು ನಾಗರಿಕರ ವಿರುದ್ಧ "ರಷ್ಯಾದ ನಡೆಯುತ್ತಿರುವ ಕ್ಷಿಪಣಿ ಮತ್ತು ಡ್ರೋನ್" ದಾಳಿಗಳ ಕುರಿತು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ದೋವಲ್ ಅವರಿಗೆ ಯೆರ್ಮಾಕ್ ವಿವರಿಸಿದರು. ಯೆರ್ಮಾಕ್ ಕಳೆದ ವಾರ ಡ್ನಿಪ್ರೊ ನದಿಯ ಕಖೋವ್ಕಾ ಅಣೆಕಟ್ಟಿನ ಸ್ಫೋಟದ ಬಗ್ಗೆ ಪ್ರಸ್ತಾಪಿಸಿದರು ಮತ್ತು ಈ "ಮಾನವ ನಿರ್ಮಿತ ವಿಪತ್ತಿನ" ಪರಿಣಾಮಗಳನ್ನು ತೊಡೆದುಹಾಕುವ ಪ್ರಯತ್ನಗಳಲ್ಲಿ ಅಂತರರಾಷ್ಟ್ರೀಯ ಸಮುದಾಯವನ್ನು ಸೇರಲು ಭಾರತಕ್ಕೆ ಕರೆ ನೀಡಿದರು ಎಂದು ಹೇಳಿಕೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries