ನವದೆಹಲಿ: ವಿಮಾನಯಾನ ಸಂಸ್ಥೆಗೆ ಅಪರೂಪ ಎನ್ನಬಹುದಾದ ಸಮಸ್ಯೆ ಭಾರತದ ವಿಸ್ತಾರಾ ಏರ್‌ಲೈನ್ಸ್‌ಗೆ ಎದುರಾಗಿದೆ.
ಈ ಕಂಪನಿಯ ವಿಮಾನಗಳ ಕ್ಯಾಬಿನ್ ಸಿಬ್ಬಂದಿಗೆ ಸಮಸ್ತ್ರದ ಕೊರತೆಯಾಗಿದೆ ಎಂದು ಟಾಟಾ ಸಮೂಹಕ್ಕೆ ಸೇರ್ಪಡೆಯಾಗಿರುವ ವಿಸ್ತಾರಾ ಏರ್‌ಲೈನ್ಸ್ ಟ್ವಿಟರ್‌ನಲ್ಲಿ ತಿಳಿಸಿದೆ.
ಪೂರೈಕೆ ಸಮಸ್ಯೆ ಹಾಗೂ ವಿಸ್ತಾರಾ ಏರ್‌ಲೈನ್ಸ್‌ನಲ್ಲಿ ಸಿಬ್ಬಂದಿಗಳ ಸಂಖ್ಯೆ ಹೆಚ್ಚಳವೇ ಸಮವಸ್ತ್ರಗಳ ಸಮಸ್ಯೆಗೆ ಮೂಲ ಕಾರಣವಾಗಿದೆ ಎನ್ನಲಾಗಿದೆ.
'ನಮ್ಮ ಸಿಬ್ಬಂದಿಗೆ ಸಮವಸ್ತ್ರ ಕೊರತೆ ಎದುರಾಗಿದೆ. ಪೂರೈಕೆ ಹಾಗೂ ಸಿಬ್ಬಂದಿ ಹೆಚ್ಚಳ ಇದಕ್ಕೆ ಕಾರಣವಾಗಿದೆ. ಅದಾಗ್ಯೂ ನಾವು ಕ್ಯಾಬಿನ್ ಸಿಬ್ಬಂದಿಗೆ ತಾತ್ಕಾಲಿಕವಾಗಿ ಕಪ್ಪು ಪ್ಯಾಂಟ್ ಹಾಗೂ ನೇರಳೆ ಬಣ್ಣದ ಪೊಲೊ ಟಿ-ಶರ್ಟ್ ಅನ್ನು ಧರಿಸಲು ಆದೇಶಿಸಿದ್ದೇವೆ. ಶೀಘ್ರದಲ್ಲೇ ಈ ಸಮಸ್ಯೆ ಸರಿಹೋಗಲಿದೆ' ಎಂದು ಹೇಳಿಕೆಯಲ್ಲಿ ತಿಳಿಸಿದೆ.
ವಿಸ್ತಾರ ಏರ್‌ಲೈನ್ಸ್ ಕಂಪನಿಯನ್ನು ಏರ್ ಇಂಡಿಯಾದಲ್ಲಿ ವಿಲೀನ ಮಾಡಲಾಗಿದೆ. ಏರ್ ಇಂಡಿಯಾ ಸಂಸ್ಥೆಯು ಈಗ ಟಾಟಾ ಸನ್ಸ್ ಮಾಲೀಕತ್ವದಲ್ಲಿದೆ.