ನವದೆಹಲಿ: 'ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ ಜುಲೈ 1, 2023ಕ್ಕೆ ಭಾರತದ ಜನಸಂಖ್ಯೆ 139 ಕೋಟಿ ಎಂದು ಅಂದಾಜಿಸಲಾಗಿದೆ' ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಗೆ ಮಂಗಳವಾರ ತಿಳಿಸಿದ್ದಾರೆ.

ಜನಸಂಖ್ಯೆ ವಿವರದ ಬಗ್ಗೆ ಕೇಳಲಾದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ ಸಚಿವರು, 'ರಾಷ್ಟ್ರೀಯ ಆಯೋಗ (ಜನಸಂಖ್ಯೆ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಿಸಿದ ಮಾಹಿತಿ ಪ್ರಕಾರ ಜುಲೈ 1, 2023ಕ್ಕೆ ಭಾರತದ ಜನಸಂಖ್ಯೆ 139,23,29,000 ಇದೆ' ಎಂದರು.
'ವಿಶ್ವಸಂಸ್ಥೆ, ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ, ಪಾಪುಲೇಶನ್ ಡಿವಿಷನ್ ಆನ್‌ಲೈನ್ ಪಬ್ಲಿಕೇಶನ್, ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟಸ್- 2022 ಅನ್ನು ಈ ವೇಳೆ ಗಣನೆಗೆ ತೆಗೆದುಕೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.
2021ರಂದು ಜನಗಣತಿ ನಡೆಸುವ ಬಗ್ಗೆ ಮಾರ್ಚ್ 28, 2019ರಂದು ಗೆಜೆಟ್‌ನಲ್ಲಿ ತಿಳಿಸಲಾಗಿತ್ತು. ಕೋವಿಡ್ ಕಾರಣದಿಂದ 2021ರ ಜನಗಣತಿಯನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಜುಲೈ 1, 2023ಕ್ಕೆ ಚೀನಾದ ಜನಸಂಖ್ಯೆ 142 ಕೋಟಿ (142,56,71,000) ಎಂದು ಅಂದಾಜಿಸಲಾಗಿದೆ.