ನವದೆಹಲಿ (PTI): ಮುಂದಿನ ವರ್ಷದಿಂದ ನಡೆಯುವ ರಾಷ್ಟ್ರೀಯ ನಿರ್ಗಮನ ಪರೀಕ್ಷೆಯಲ್ಲಿ (ನೆಕ್ಸ್ಟ್) ಅಂಕಗಳನ್ನು ಸುಧಾರಿಸಿಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳು ಮೊದಲ ಹಂತದ ಪರೀಕ್ಷೆಯನ್ನು ಹಲವು ಬಾರಿ ಬರೆಯಬಹುದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಶುಕ್ರವಾರ ಹೇಳಿದೆ.

ಎನ್‌ಎಂಸಿಯು ಶುಕ್ರವಾರ 'ನೆಕ್ಸ್ಟ್' ಪರೀಕ್ಷಾ ನಿಯಮಾವಳಿ 2023 ಅನ್ನು ಬಿಡುಗಡೆ ಮಾಡಿದ್ದು, ಮುಂದಿನ ವರ್ಷದಿಂದ ನೆಕ್ಟ್ಟ್ ಮೊದಲ ಹಂತ ಹಾಗೂ ಎರಡನೇ ಹಂತವನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುವುದು ಎಂದು ಹೇಳಿದೆ.
ಆದರೆ, ನೆಕ್ಸ್ಟ್ ಮೊದಲ ಹಂತದ ಪರೀಕ್ಷೆಯ ಕೊನೆಯ ಪ್ರಯತ್ನದಲ್ಲಿ ಪಡೆದ ಅಂಕಗಳನ್ನು ಮಾತ್ರ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಲಾಗುವುದು ಎಂದೂ ಆಯೋಗವು ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆ ಪ್ರಕಾರ ನೆಕ್ಸ್ಟ್ ಪರೀಕ್ಷೆ ನಡೆಸುವುದು ಕಡ್ಡಾಯ. ಇದರಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳು ವೈದ್ಯಕೀಯ ವೃತ್ತಿ ಆರಂಭಿಸಲು ಹಾಗೂ ಮೆರಿಟ್ ಆಧಾರದ ಮೇಲೆ ಸ್ನಾತಕೋತ್ತರ ಪ್ರವೇಶ ಪಡೆಯಲು ಅರ್ಹತೆ ಪಡೆಯುತ್ತಾರೆ. ಹೊಸ ಮಾರ್ಗಸೂಚಿ ಪ್ರಕಾರ ಎಂಬಿಬಿಎಸ್‌ಗೆ ಪ್ರವೇಶ ಪಡೆದ ಹತ್ತು ವರ್ಷದೊಳಗೆ ಈ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.