ಕಾಸರಗೋಡು : ನಗರಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕಾತಿಗೆ ಸಂಬಂಧಿಸಿದಂತೆ ಕಾಸರಗೋಡು ಮಕ್ಕಲ ಅಭಿವೃದ್ಧಿ ಯೋಜನಾ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದವರಲ್ಲಿ ಜುಲೈ 10 ಮತ್ತು 11 ರಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಜುಲೈ 12 ರಂದು ಅಂಗನವಾಡಿ ಸಹಾಯಕಿಯರ ನೇಮಕಾತಿಗಿರುವ ಸಂದರ್ಶನ ಬೆಳಗ್ಗೆ 10ರಿಂದ ನಗರಸಭೆಯ ವನಿತಾ ಭವನದಲ್ಲಿ ನಡೆಯಲಿದೆ.
ಅಧಿಸೂಚನೆ ಲಭಿಸದ ಯಾವುದೇ ಅರ್ಜಿದಾರರು ಆಯಾ ದಿನಾಂಕದಂದು ಎಲ್ಲಾ ಮೂಲ ಪ್ರಮಾಣಪತ್ರಗಳೊಂದಿಗೆ ನೇಮಕಾತಿಗೆ ಹಾಜರಾಗಬೇಕುದೀ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 230045)ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.