ಮಂಗಳೂರು: ಕ್ಯಾಟರಿಂಗ್ ಗೆ ಬೇಕಾದ ಉಪಕರಣ ಕಳುಹಿಸುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ವ್ಯಕ್ತಿಯೊಬ್ಬರಿಗೆ ರೂ. 1.16 ಲಕ್ಷ ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಗ್‌ಬಾಸ್ಕೆಟ್ ಆ್ಯಪ್‌ನಲ್ಲಿ ಅಡುಗೆ ಸಲಕರಣೆಗಳನ್ನು ನೋಡಿದ ದೂರುದಾರರು ಜು.15ರಂದು ಅಪಾಧಿತರಾದ ಬಿಗ್‌ಬಾಸ್ಕೆಟ್ ಫೇಸ್ ಬುಕ್ ಖಾತೆದಾರರೊಂದಿಗೆ ಚಾಟ್ ಮಾಡಿದ್ದರು. ಈ ಸಂದರ್ಭದಲ್ಲಿ ಅಪರಿಚಿತರು ಕಡಿಮೆ ಬೆಲೆಗೆ ಅಡುಗೆ ಸಲಕರಣೆ ಪೂರೈಸುವ ಭರವಸೆ ನೀಡಿದ್ದು, ಬಿಗ್‌ಬಾಸ್ಕೆಟ್ ಹೆಸರಿನ ಫೇಸ್‌ಬುಕ್ ಲಿಂಕ್ ಕಳುಹಿಸಿದ್ದಾರೆ. ಅಲ್ಲದೇ ತಮ್ಮ ವಿವರಗಳನ್ನು ನೀಡುವಂತೆ ದೂರುದಾರರಿಗೆ ಹೇಳಿದ್ದಾರೆ.
ವ್ಯಕ್ತಿ ತನ್ನ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿವರಗಳನ್ನು ನೀಡಿದ ನಂತರ, ಅವನ ಖಾತೆಯಿಂದ 1.16 ಲಕ್ಷ ರೂಪಾಯಿಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗಿದೆ. ಈ ಸಂಬಂಧ ಇಲ್ಲಿನ ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.