ನವದೆಹಲಿ: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ದೇಶದ ರಾಜಧಾನಿ ದೆಹಲಿಯಲ್ಲೂ ಮಳೆಯ ಅಬ್ಬರ ಜೋರಾಗಿದೆ. ಯಮುನಾ ನದಿ ತುಂಬಿ ಹರಿಯುತ್ತಿದ್ದು, ಮಂಗಳವಾರ ಬೆಳಿಗ್ಗೆ 11 ಗಂಟೆ ಹೊತ್ತಿಗೆ ನದಿ ಅಪಾಯದ ಮಟ್ಟ ಮೀರುವ ಸಾಧ್ಯತೆ ಇದೆ ಎಂದು ಸಚಿವೆ ಅತಿಶಿ ಹೇಳಿದ್ದಾರೆ.

ಭಾರಿ ಪ್ರಮಾಣದ ನೀರು ನದಿಗೆ ಹರಿದುಬರುತ್ತಿದೆ ಎಂದು ಅವರು ಹೇಳಿದ್ದಾರೆ.
ನದಿ ಅಂಚಿನ ಜನರ ಸ್ಥಳಾಂತರ ಮತ್ತು ಪರಿಹಾರ ಕಾರ್ಯಗಳ ತಯಾರಿ ಬಗ್ಗೆ ಪರಿಶೀಲನೆ ನಡೆಸಿದ ಲೋಕೋಪಯೋಗಿ ಸಚಿವೆ ಅತಿಶಿ, ಉತ್ತರ ಭಾರತದ ರಾಜ್ಯಗಳಲ್ಲಿ ವ್ಯಾಪಕ ಮಳೆ ಬೀಳುತ್ತಿರುವುದರಿಂದ ದೆಹಲಿ ಮೂಲಕ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ ಎಂದು ಹೇಳಿದರು.
'ಭಾನುವಾರ ಬೆಳಿಗ್ಗೆ ಹೊತ್ತಿಗೆ ಹರಿಯಾಣದಿಂದ ಯಮುನಾ ನದಿಗೆ 43,000 ಕ್ಯುಸೆಕ್ಸ್ ನೀರು ಹರಿದುಬಂದಿದ್ದು, ಈಗ ನದಿಯಲ್ಲಿರುವ ನೀರಿನ ಪ್ರಮಾಣ ಸುಮಾರು 3 ಲಕ್ಷ ಕ್ಯುಸೆಕ್ಸ್‌ಗೆ ಹೆಚ್ಚಳವಾಗಿದೆ. ಮಂಗಳವಾರ ಬೆಳಿಗ್ಗೆ 10-11ಗಂಟೆ ಹೊತ್ತಿಗೆ ಯಮುನಾ ನದಿಯ ನೀರಿನ ಪ್ರಮಾಣ ಅಪಾಯದ ಮಟ್ಟ ಮೀರುವ ಸಾಧ್ಯತೆ ಇದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ' ಎಂದು ಅವರು ಹೇಳಿದ್ದಾರೆ.
ಯಮುನಾ ನದಿಯ ಎಚ್ಚರಿಕೆಯ ಮಟ್ಟ 204.50 ಮೀಟರ್ ಆಗಿದ್ದು, ಅಪಾಯದ ಮಟ್ಟ 205.33 ಮೀಟರ್ ಆಗಿದೆ.