ಕೀವ್: ರಾಜಧಾನಿ ಕೀವ್ ಮೇಲೆ ದಾಳಿ ನಡೆಸಲು ಬಂದಿದ್ದ ರಷ್ಯಾದ 11 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಬುಧವಾರ ಹೇಳಿದೆ.
ಕೀವ್: ರಾಜಧಾನಿ ಕೀವ್ ಮೇಲೆ ದಾಳಿ ನಡೆಸಲು ಬಂದಿದ್ದ ರಷ್ಯಾದ 11 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಬುಧವಾರ ಹೇಳಿದೆ.
ಇರಾನ್ ನಿರ್ಮಿತ ರಷ್ಯಾದ ಡ್ರೋನ್‌ಗಳನ್ನು ಉಕ್ರೇನ್ ಸೋಮವಾರ ರಾತ್ರಿಯೂ ಹೊಡೆದುಹಾಕಿತ್ತು. ಎರಡನೇ ದಿನವಾದ ಮಂಗಳವಾರ ರಾತ್ರಿಯೂ ಕೀವ್‌ನತ್ತ ಬಂದ ಡ್ರೋನ್‌ಗಳನ್ನು ನಾಶಪಡಿಸುವಲ್ಲಿ ಉಕ್ರೇನ್ ಸಫಲವಾಗಿದೆ.
'ಒಟ್ಟು 15 ಕಾಮಿಕೇಜ್ ಡ್ರೋನ್‌ಗಳು ದಾಳಿಗೆ ಬಂದಿದ್ದವು. ಕೀವ್‌ನ ಕೇಂದ್ರ ಮತ್ತು ಪೂರ್ವ ಭಾಗದ ವಾಯುಪ್ರದೇಶದಲ್ಲಿ ಪತ್ತೆಯಾದ 11 ಡ್ರೋನ್‌ಗಳನ್ನು ನಾಶಪಡಿಸಲಾಗಿದೆ' ಎಂದು ಉಕ್ರೇನ್‌ನ ವಾಯುಪಡೆ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.
ಇನ್ನುಳಿದ ಡ್ರೋನ್‌ಗಳನ್ನು ಹೊಡೆದುರುಳಿಸಲಾಯಿತೇ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಡ್ರೋನ್ ದಾಳಿಯಿಂದಾಗಿ ಚರ್ಕ್‌ಸೆ ಪ್ರಾಂತ್ಯದಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ರಾಜ್ಯಪಾಲ ಇಗೋರ್ ಟಬುರೆಟ್ಸ್ ತಿಳಿಸಿದ್ದಾರೆ.