ಡೆಂಗ್ಯೂ, ಜ್ವರ ಮುಂತಾದ ಆರೋಗ್ಯ ಸಮಸ್ಯೆ ಉಂಟಾದಾಗ ಪ್ಲೇಟ್‌ಲೆಟ್ ಕಡಿಮೆಯಾಗುವುದು. ಅದರಲ್ಲೂ ಡೆಂಗ್ಯೂ ಜ್ವರ ಬಂದರಂತೂ ಪ್ಲೇಟ್‌ಲೆಟ್ ತುಂಬಾನೇ ಕಡಿಮೆಯಾಗುವುದು. ಕೆಲವರಿಗೆ ಪ್ಲೇಟ್‌ತುಂಬಾ ಕಡಿಮೆಯಾಗಿ ಪ್ರಾಣಕ್ಕೆ ಕೂಡ ಅಪಾಯ ಉಂಟಾಗುವುದು. ಈ ಕಾರಣದಿಂದ ದೇಹದಲ್ಲಿ ಪ್ಲೇಟ್‌ಲೆಟ್ ಕೌಂಟ್ ಕಡಿಮೆಯಾದರೆ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು, ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು.
ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಈ ಬಗೆಯ ನೈಸರ್ಗಿಕ ಮನೆಮದ್ದು ಕೂಡ ಮಾಡುವುದರಿಂದ ನಿಮ್ಮ ಆರೋಗ್ಯ ಸ್ಥಿತಿ ಬೇಗನೆ ಚೇತರಿಸಿಕೊಳ್ಳಬಹುದು.1. ಪಪ್ಪಾಯಿ ಎಲೆ ಇದು ತುಂಬಾನೇ ಪರಿಣಾಮಕಾರಿಯಾದ ಮನೆಮದ್ದಾಗಿದೆ. ಪ್ಲೇಟ್‌ಲೆಟ್ ತುಂಬಾ ಕಡಿಮೆಯಾದಾಗ ನೀವು ಸ್ವಲ್ಪ ಪಪ್ಪಾಯಿ ಎಲೆಯ ರಸ ಕುಡಿಯಬೇಕು. ಎರಡು ಹೊತ್ತು 2 ಚಮಚ ಕುಡಿದರೆ ಸಾಕು ಈ ರೀತಿ 2-3 ದಿನ ಕುಡಿಯುವಷ್ಟರಲ್ಲಿ ಪ್ಲೇಟ್‌ಲೆಟ್ ಹೆಚ್ಚಾಗಿರುತ್ತದೆ. ಆದರೆ ತುಂಬಾ ಕುಡಿಯಬೇಡಿ ಬೇಧಿ ಉಂಟಾಗಬಹುದು. ಇದರ ಜೊತೆ ಪಪ್ಪಾಯಿ ಹಣ್ಣನ್ನು ಸೇವಿಸಿ: ನೀವು ಪಪ್ಪಾಯಿ ಹಣ್ಣನ್ನು ಸೇವಿಸಿ, ಪಪ್ಪಾಯಿ ಹಣ್ಣು ನಿಮಗೆ ಎಷ್ಟು ಬೇಕು ಅಷ್ಟು ಸೇವಿಸಿ.
2. ಲೋಳೆಸರ
ಲೋಳೆಸರ ಕೂಡ ಬಿಳಿ ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ನೀವು ಹಣ್ಣಿನ ಜ್ಯೂಸ್ ಅಥವಾ ನಿಂಬು ಪಾನೀಯ ಜೊತೆಗೆ 2 ಚಮಚ ಲೋಳೆಸರ ಹಾಕಿ ಜ್ಯೂಸ್ ಮಾಡಿ ಕುಡಿಯಿರಿ. ಇದು ಪ್ಲೇಟ್‌ಲೆಟ್ ಹೆಚ್ಚಿಸಲು ಸಹಕಾರಿ.
3. ವಿಟಮಿನ್ ಸಿ
ವಿಟಮಿನ್ ಸಿ ಪ್ಲೇಟ್‌ಲೆಟ್ ಹೆಚ್ಚಿಸಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ ಸಿ ಸಹಕಾರಿ. ಕಿತ್ತಳೆ, ನಿಂಬೆಹಣ್ಣು, ಗ್ರೇಪ್‌ಫ್ರೂಟ್ಸ್, ಕಿವಿ, ಬೆರ್ರಿ ಈ ಹಣ್ಣುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
4. ಬೀಟ್‌ರೂಟ್
ಬೀಟ್‌ರೂಟ್‌ನಲ್ಲಿ ಕಬ್ಬಿಣದಂಶ, ಫಾಲಿಕ್ ಆಮ್ಲ, ವಿಟಮಿನ್ ಸಿ ಇರುವುದರಿಂದ ಪ್ಲೇಟ್‌ಲೆಟ್ ಹೆಚ್ಚಿಸುವುದರಲ್ಲಿ ಸಹಕಾರಿಯಾಗಿದೆ. ಬೀಟ್‌ರೂಟ್ ಜ್ಯೂಸ್ ದಿನದಲ್ಲಿ 2 ಲೋಟ ಕುಡಿಯಿರಿ.
5. ನೆಲ್ಲಿಕಾಯಿ
ನೆಲ್ಲಿಕಾಯಿ ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದರಲ್ಲಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಕಾರಿಯಾಗಿದೆ.
6. ಗೋಧಿಹುಲ್ಲು
ಗೋಧಿಹುಲ್ಲಿನ ಜ್ಯೂಸ್ ಕುಡಿಯುವುದರಿಂದ ಕೂಡ ಪ್ಲೇಟ್‌ಲೆಟ್ ಹೆಚ್ಚಾಗುವುದು. ಇದನ್ನು ದಿನದಲ್ಲಿ ಎರಡು ಬಾರಿ ಕುಡಿದರೆ ಒಳ್ಳೆಯದು.
7. ಸಿಹಿ ಕುಂಬಳಕಾಯಿ
ಸಿಹಿ ಕುಂಬಳಕಾಯಿಯಲ್ಲಿ ವಿಟಮಿನ್ ಎ ಇದ್ದು ಪ್ಲೇಟ್‌ಲೆಟ್ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದರಲ್ಲಿ ಕಬ್ಬಿಣದಂಶ ಇದ್ದು ಕೆಂಪು ರಕ್ತ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
8. ವಿಟಮಿನ್ ಕೆ ಅಧಿಕವಿರುವ ಆಹಾರ
ಸೊಪ್ಪು, ಪಾಲಾಕ್, ಬ್ರೊಕೋಲಿ ಈ ಬಗೆಯ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.
9. ಸತು ಅಧಿಕವಿರುವ ಆಹಾರ
ಮೃದ್ವಂಗಿಗಳು, ಏಡಿ, ನಟ್ಸ್, ಬೀಜಗಳು ಇವುಗಳಲ್ಲಿ ಸತುವಿನಂಶ ಇರುವುದರಿಂದ ಪ್ಲೇಟ್‌ಲೆಟ್ ಹೆಚ್ಚಿಸುವಲ್ಲಿ ಸಹಕಾರಿ.
10. ದಾಳಿಂಬೆ
ದಾಳಿಂಬೆಯನ್ನು ಹಾಗೇ ತಿನ್ನುವುದು ಅಥವಾ ಜ್ಯೂಸ್ ಮಾಡಿ ಕುಡಿಯುವುದು ಒಳ್ಳೆಯದು.
11. ಫೋಲೆಟ್
ಕಿತ್ತಳೆ, ಕಿಡ್ನಿ ಬೀನ್ಸ್, ಧಾನ್ಯಗಳು, ನೆಲಗಡಲೆ ಈ ಬಗೆಯ ಆಹಾರ ಸೇವಿಸಿ.