ವಾಷಿಂಗ್ಟನ್: ಟ್ವಿಟರ್‌ಗೆ ಪೈಪೋಟಿ ಒಡ್ಡುವ ಉದ್ದೇಶದಿಂದ ಫೇಸ್‌ಬುಕ್ ಒಡೆತನದ 'ಮೆಟಾ' ಕಂಪನಿ 'ಥ್ರೆಡ್ಸ್' ಎಂಬ ಮೈಕ್ರೋಬ್ಲಾಂಗಿಂಗ್ ಆಯಪ್‌ಅನ್ನು ಇಂದು ಬಿಡುಗಡೆಗೊಳಿಸಿದೆ. ಆಯಪ್ ಬಿಡುಗಡೆಯಾದ ಬೆನ್ನಲ್ಲೇ ಮೆಟಾ ಕಂಪನಿ ಮಾಲೀಕ ಮಾರ್ಕ್ ಜುಕರ್ ಬರ್ಗ್ ಮಿಮ್‌ವೊಂದನ್ನು(Meme) ಟ್ವೀಟ್ ಮಾಡಿ ಟ್ವಿಟರ್ ಒಡೆಯ ಎಲಾನ್ ಮಸ್ಕ್ ಅವರ ಕಾಲೆಳೆದಿದ್ದಾರೆ.
ಮಾರ್ಕ್ ಜುಕರ್ ಸುಮಾರು 11 ವರ್ಷದ ನಂತರ ಇದೇ ಮೊದಲ ಬಾರಿಗೆ ಟ್ವೀಟ್ ಮಾಡಿದ್ದಾರೆ. ಜನವರಿ 2012ರಲ್ಲಿ ಅವರು ಕೊನೆಯ ಬಾರಿಗೆ ಟ್ವೀಟ್ ಮಾಡಿದ್ದರು.
ಜುಕರ್ ಬರ್ಗ್ ತಮ್ಮ ಟ್ವಿಟರ್ ಪೇಜ್ '@findkd' ಅಲ್ಲಿ ಸ್ಪೈಡರ್ ಮ್ಯಾನ್ ಕುರಿತ ಮಿಮ್‌ವೊಂದನ್ನು ಟ್ವೀಟ್ ಮಾಡಿದ್ದಾರೆ. ಜುಕರ್ ಬರ್ಗ್ ಅವರ ಟ್ವೀಟ್ ಮೂರು ಗಂಟೆಯಲ್ಲಿ 44 ಸಾವಿರ ಲೈಕ್ಸ್ ಮತ್ತು 5 ಮಿಲಿಯನ್ ವೀವ್ಸ್ ಪಡೆದಿದೆ.
ಬುಧವಾರ ಮಧ್ಯರಾತ್ರಿ ಭಾರತ, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಜಪಾನ್ ಸೇರಿದಂತೆ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 'ಥ್ರೆಡ್ಸ್' ಆಯಪ್ ಬಿಡುಗಡೆಯಾಗಿದೆ. ಇನ್‌ಸ್ಟಾಗ್ರಾಂನಲ್ಲಿರುವ ವಿವರಗಳನ್ನು (ಯೂಸರ್ ಕ್ರೆಡೆನ್ಷಿಯಲ್) ಬಳಸಿ ಥ್ರೆಡ್ಸ್‌ಗೆ ಲಾಗಿನ್ ಆಗಬಹುದಾಗಿದೆ.